ಸಹಮತ ವೇದಿಕೆ
ಕಲ್ಯಾಣವೆಂಬುದು ವಿಶಿಷ್ಟವಾದ ಅರಿವಿನ ನಡಿಗೆಯಾಗಿತ್ತು. ವಿವಿಧ ಸಮುದಾಯ, ಕಸುಬುಗಳಿಗೆ ಸೇರಿದ್ದ ಸಾಮಾನ್ಯರು ಅಸಾಮಾನ್ಯವಾದ ಪಾಠಗಳನ್ನು ಜಗತ್ತಿಗೆ ಕಲಿಸಿದರು. ಅದ್ಭುತವಾದ ಸಂಗತಿಗಳನ್ನು ಸರಳ ವಚನಗಳಲ್ಲಿ ಕ್ರೋಡೀಕರಿಸಿದರು. ಜಗತ್ತನ್ನು ಬಾಧಿಸುತ್ತಿರುವ ಬಹುತೇಕ ಸಮಸ್ಯೆಗಳಿಗೆ ಅರಿವು, ಅನ್ನದಾಸೋಹ ಮತ್ತು ಕಾಯಕ ಇವು ಪರಿಹಾರವಾಗಬಲ್ಲವು. ಹಾಗಿದ್ದ ಮೇಲೆ ನಾವೇಕೆ ಮತ್ತೆ ಕಲ್ಯಾಣದ ಕಡೆಗೆ ನೋಡಬಾರದು ಎಂಬ ಚಿಂತನೆಯಿಂದ ಹುಟ್ಟಿದ್ದೇ ಸಹಮತ ವೇದಿಕೆ. ಎಲ್ಲರೊಡಗೂಡಿದ ನಡಿಗೆಯೇ ಮತ್ತೆ ಕಲ್ಯಾಣ.
