ಬನ್ನಿ ಭಾಗವಹಿಸಿ


ಮತ್ತೆ ಕಲ್ಯಾಣದ ಸಹಭಾಗಿಗಳಾಗಲು ನಿಮಗೆ ಸ್ವಾಗತ ಕನ್ನಡದ ಅಸ್ಮಿತೆಯೊಂದಿಗೆ ಹೆಣೆದುಕೊಂಡಿರುವ ಮತ್ತೆ ಕಲ್ಯಾಣವೆಂಬ ಹೆಸರು ಒಂದು ಸಂಕೇತವಷ್ಟೇ. ನಮ್ಮ ಪರಂಪರೆಯಲ್ಲಿನ ಒಳಿತನ್ನು, ಸಮಕಾಲೀನ ಸಂದರ್ಭಕ್ಕೆ ಬೆಳಕನ್ನೀಯಲು ತೇಯ್ದುಕೊಳ್ಳಬಹುದೆಂಬ ವಿಶ್ವಾಸದ ದ್ಯೋತಕ. ಇದು ಕನ್ನಡನಾಡಿನ ಬಸವ ತತ್ವದ ಅನುಯಾಯಿಗಳು, ಎಲ್ಲಾ ಜಾತಿ-ಧರ್ಮಗಳಿಗೆ ಸೇರಿದ ಚಿಂತಕರು, ಸಮಾನತೆಯಲ್ಲಿ ನಂಬಿಕೆಯಿಟ್ಟ ಸಮಾನ ಮನಸ್ಕರು ಜೊತೆಗೂಡಿ ನಡೆಸಬೇಕಾದ ಪ್ರಕ್ರಿಯೆ. ಈಗಾಗಲೇ ನಮ್ಮೊಟ್ಟಿಗೆ ನಾಡಿನ ಪ್ರಮುಖ ಸ್ವಾಮಿಜಿಗಳು, ಚಿಂತಕರು, ಪ್ರಗತಿಪರರು, ಸಾಹಿತಿಗಳು, ಕಲಾವಿದರು, ಸಂಘಟಕರು ಧ್ವನಿಗೂಡಿಸಿದ್ದಾರೆ. ನೀವೂ ಜೊತೆಯಾದರೆ ಇದರ ಶಕ್ತಿ ಹೆಚ್ಚುತ್ತದೆ. ಕೆಡವುವುದು ಸುಲಭ; ಕಟ್ಟುವುದೇ ಕಷ್ಟ. ಮುಂದಿನ ಪೀಳಿಗೆಗೆ ದೊರಕಬೇಕಾದ ಮಾನವೀಯತೆಯ ಭದ್ರ ಬುನಾದಿಗಾಗಿ ನಾವಿಂದು ಕೆಡವದೆ ಕಟ್ಟುವ ಕಷ್ಟದ ದಾರಿಯನ್ನು ಆರಿಸಿಕೊಳ್ಳೊಣ. ಒಡೆದ ಮನಸ್ಸುಗಳನ್ನು ಒಂದುಗೂಡಿಸಲು ಮತ್ತೆ ಕಲ್ಯಾಣದ ದಾರಿಯಲ್ಲಿ ನಡೆಯೋಣ; ಎಲ್ಲರೂ ಬನ್ನಿ ಕಲ್ಯಾಣದೆಡೆಗೆ ನಮ್ಮ ನಡಿಗೆ.