ಆಗಸ್ಟ್ ೨೮ ಬುಧವಾರ, ವಿಜಯಪುರ
ವಿಜಯಪುರದಲ್ಲಿ 28ನೇ ದಿನದ ಮತ್ತೆ ಕಲ್ಯಾಣ ಆಂದೋಲನ. ಅಭಿಯಾನದಲ್ಲಿ ಸಾರ್ವಜನಿಕ ಸಮಾವೇಶ. ಅನನ್ಯ ಟಿವಿ ನೇರಪ್ರಸಾರ ವೀಕ್ಷಿಸಲು - ಕ್ಲಿಕ್ ಮಾಡಿ
ಇಲ್ಲಿನ ತೋಂಟದ ಅನುಭವ ಮಂಟಪದಲ್ಲಿ 'ಮತ್ತೆ ಕಲ್ಯಾಣ' ಕಾರ್‍ಯಕ್ರಮದ ನಿಮಿತ್ತ ಏರ್ಪಡಿಸಿದ್ದ ಸಾರ್ವಜನಿಕ ಸಮಾವೇಶದ ನೇತೃತ್ವ ವಹಿಸಿದ್ದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಈ ಭಾಗದಲ್ಲಿ ಜಲಪ್ರಳಯವಾದರೂ ಭಕ್ತಿಗೆ ಬರವಿಲ್ಲ ಎನ್ನುವುದು ಈ ಅಪಾರ ಜನಸ್ತೋಮ ನೋಡಿದರೆ ತಿಳಿಯುತ್ತದೆ. ಈ ಭಕ್ತಿ ಮೂಢ ಭಕ್ತಿಯಾಗಬಾರದು; ವ್ಯಕ್ತಿತ್ವವನ್ನು ವಿಕಾಸಗೊಳಿಸುವ, ಮೌಢ್ಯಗಳನ್ನು ನಿರಾಕರಿಸುವ ದೃಢಭಕ್ತಿಯಾಗಬೇಕು. ಬಸವ ತತ್ವವನ್ನು ಒಪ್ಪಿಕೊಳ್ಳುವವರೇ ದೇವಾಲಯಗಳಿಗೆ ಸಾಲಿಡುವುದು ವಿಪರ್ಯಾಸ. ದೇಹವನ್ನೇ ದೇವಾಲಯ ಮಾಡಿಕೊಂಡಾಗ, ಸ್ಥಾವರವನ್ನು ನಿರಾಕರಿಸಿ ಜಂಗಮವನ್ನು ಅಪ್ಪಿಕೊಂಡಾಗ, ಸಕಲಜೀವಾತ್ಮರನ್ನು ಪ್ರೀತಿಸಿದಾಗ ಬಸವ ಭಕ್ತರಾಗಲು ಅರ್ಹತೆ ಬರುವುದು. ಬಸವಣ್ಣ ಹಣಕಾಸಿನಿಂದ ಬಡವನಲ್ಲ; ಭಕ್ತಿಂದ ಬಡವ. ಆ ಬಡತನವನ್ನು ಮಾದರ ಚೆನ್ನಯ್ಯ, ಡೋಹರ ಕಕ್ಕಯ್ಯನವರ ಬಳಿ ಭಿಕ್ಷೆ ಬೇಡಿ ತುಂಬಿಕೊಂಡೆ ಎನ್ನುವರು. ಅಹಂಕಾರದಿಂದ ಸಮಾಜವನ್ನು ಜಾಗೃತಗೊಳಿಸಲು ಸಾಧ್ಯವಿಲ್ಲ. ವಿನಯವಂತಿಕೆ, ಸೌಜನ್ಯ, ಹೃದಯವಂತಿಕೆ ಬೇಕು. ಸ್ವರ್ಗ ನರಕಗಳು ಬೇರಿಲ್ಲ; ಇಲ್ಲಿಯೇ, ಇದೇ ಜೀವನದಲ್ಲಿ ಕಾಣುವಿರಿ. `ಎಲವೋ ಎಂದರೆ ನರಕ, ಅಯ್ಯಾ ಎಂದರೆ ಸ್ವರ್ಗ' ಎಂದು ವಚನಕಾರರು ಹೇಳುವ ಮೂಲಕ ಭಯವನ್ನು ಹೋಗಲಾಡಿಸಿದರು. ಮನುಷ್ಯ ಮನಸ್ಸು ಮಾಡಿದರೆ ಏನುಬೇಕಾದರೂ ಸಾಧಿಸಲು ಸಾಧ್ಯ. ನಮ್ಮ ಮನಸ್ಸಿನಲ್ಲಿರುವ ಜಾತಿಯ ವಿಷ ಬೀಜವನ್ನು ಕಿತ್ತು ಹಾಕಿದರೆ ಮತ್ತೆ ಕಲ್ಯಾಣ ಸಾರ್ಥಕವಾಗುವುದು. ಗೃಹಿಣಿಯ ಕಾಯಕಕ್ಕೆ ಬೆಲೆ ಕಟ್ಟೋದಾದರೆ ದುಡಿಯುವ ಪುರುಷನ ವೇತನಕ್ಕಿಂತ ಹೆಚ್ಚು. ಅದಕ್ಕೆ ಬೆಲೆಕಟ್ಟಲು ಸಾಧ್ಯವಿಲ್ಲ. ಶ್ರಮ ಎಲ್ಲರದೂ ಒಂದೇ. ಅದರಲಲಿ ಮೇಲು-ಕೀಳಿಲ್ಲ. ಹೆಣ್ಣು ಹುಟ್ಟಿದಾಗಲೇ ವ್ಯತ್ಯಾಸ ತೋರುವ ಸಂಪ್ರದಾಯಗಳು ನಮ್ಮಲ್ಲಿವೆ. ಪದಗಳ ಬಳಕೆಯಲ್ಲೂ ಲಿಂಗ ತಾರತಮ್ಯ ಎದ್ದುಕಾಣುತ್ತದೆ. ಇಂಥ ಅಸಮಾನತೆಗಳನ್ನು ತೊಡೆಯಲು ವಚನಕಾರರ ಬೆಳಕನ್ನು ನಮ್ಮದಾಗಿಸಿಕೊಳ್ಳಬೇಕು. ಕಾಯಕದ ಜೊತೆಗೆ ದಾಸೋಹ ಪ್ರಜ್ಞೆಯೂ ಬೇಕು. ನಕಾರಾತ್ಮಕ ಚಿಂತನೆಗಿಂತ ಸಕಾರಾತ್ಮಕ ಚಿಂತನೆ ಮೂಡಿದರೆ ಮತ್ತೆ ಕಲ್ಯಾಣ ಅಸಾಧ್ಯವಲ್ಲ. ಮತ್ತೆ ಕಲ್ಯಾಣಕ್ಕೆ ಹೊರಡುವಾಗ ಅಳಕು ಇದ್ದದ್ದು ನಮ್ಮಲ್ಲಿಯೇ ಹೊರತು; ಜನರಲ್ಲಲ್ಲ ಎನ್ನುವುದು ಈಗ ನಮಗೆ ಗೊತ್ತಾಗಿದೆ. ಆನರಿಗೆ ಸರಿಯಾದ ಮಾರ್ಗಸೂಚಿ ಹಾಕಿಕೊಡುವಲ್ಲಿ ನಾವು ಸೋತಿದ್ದೇವೆ. ನಮ್ಮ ಹೊಣೆಗಾರಿಯನ್ನು ಅರ್ಥ ಮಾಡಿಕೊಂಡು ಆ ದಾರಿಯಲ್ಲಿ ಹೋಗಬೇಕು. ಭೋಗ, ತ್ಯಾಗ ಎರಡೂ ಬದುಕಿನ ಅತಿರೇಕಗಳು. ಕಲ್ಯಾಣ ದರ್ಶನ ಹೃದಯಕ್ಕೆ ಆಗಬೇಕು ಎಂದರು.
ತೋಂಟದ ಶ್ರೀ ಸಿದ್ಧರಾಮ ಸ್ವಾವಿಗಳು ಮಾತನಾಡಿ ವಿಜಯಪುರದ ಜನ ಬೇರೆ ಜಿಲ್ಲೆಗಳಿಗಿಂತ ಹೆಚ್ಚಾಗಿ ಬಸವಣ್ಣನ ವಿಚಾರಗಳನ್ನು ತಿಳುದುಕೊಂಡಿದ್ದಾರೆ. ಶರಣಿಗೆ ಪ್ರತಿಯಾಗಿ ಶರಣು ಶರಣಾರ್ಥಿ ಹೇಳುವುದೇ ಶರಣ ಧರ್ಮ. ಮತ್ತೆ ಕಲ್ಯಾಣ ವೈಶಿಷ್ಟ್ಯಪೂರ್ಣವಾದುದು. `ಕಲ್ಯಾಣ' ರೋಮಾಂಚನವುಂಟು ಮಾಡುವುದು. ವ್ಯಕ್ತಿಯ ಕಲ್ಯಾಣ ಮತ್ತು ಕಾಲಘಟ್ಟವೂ ನೆನಪಾಗುವುದು. ಮದುವೆಗೂ `ಕಲ್ಯಾಣ ಮಹೋತ್ಸವ' ಎನ್ನುವರು. ಕಲ್ಯಾಣ ಎಂದರೆ ಮಂಗಳ, ಶುಭಕರವಾದುದು. ಕಲ್ಯಾಣದ ಕ್ರಾಂತಿಯಂತೆ ಜತ್ತಿನಲ್ಲಿ ಮತ್ತೊಂದು ಕ್ರಾಂತಿ ನಡೆದಿಲ್ಲ. ಇಂದಿಗೂ ಆ ಕ್ರಾಂತಿಯ ಆಶಯ ಪ್ರಸ್ತುತವಾಗಿದೆ. ಎಲ್ಲ ಭೇದ-ಭಾವಗಳನ್ನು ತೊಡೆಯಲು ಮತ್ತೆ ಕಲ್ಯಾಣದ ಕಾರ್ಯಕ್ರಮಗಳು ಮತ್ತೆ ಮತ್ತೆ ನಡೆಯಬೇಕು. ಸಕಲ ಜೀವಾತ್ಮರಿಗೆ ಲೇಸ ಬಯಸುವ ಶರಣರೇ ಕೂಡಲ ಸಂಗನ ಕುಲಜರು ಎಂದು ಹೇಳುವರು. ಶರಣರ ಕ್ರಾಂತಿ ಕಾಯಕ ಕ್ರಾಂತಿ. ಸತ್ಯಶುದ್ಧವಾದುದೇ ಕಾಯಕ. ಮತ್ತೆ ಕಲ್ಯಾಣ ಯುವಕರಲ್ಲಿ ಚೇತನವನ್ನು, ಚಿಂತನೆಯ ಕ್ರಮವನ್ನು ರೂಪಿಸುತ್ತಿದೆ. ಬಸವಣ್ಣ ಯಾರಿಗಾದರೂ ಏನನ್ನಾದರೂ ಕೊಡಬೇಕು ಎಂದರೂ ಬೇಡುವವರೇ ಇರಲಿಲ್ಲವಂತೆ! ಲಕ್ಷ್ಮಿ ಫೋಟೊ ಪೂಜೆ ಮಾಡಿದರೆ ಸಂಪತ್ತು ಬರುವುದಿಲ್ಲ ಸತ್ಯ ಶುದ್ಧ ಕಾಯಕವ ಮಾಡಿದರೆ ಲಕ್ಷ್ಮಿ ತಾನೇ ತಾನಾಗಿ ಬರುವಳು. ಕಾಯಕ ಜೀವಿಗಳಾಗಿ ಬದುಕಬೇಕು ಎನ್ನುವ ಸಂದೇಶವನ್ನು ನೀಡಿದವರು ಶರಣರು. ಸಂಗ್ರಹವಿದ್ದಲ್ಲಿ; ಸಂಘರ್ಷ, ಅಸಮಾನತೆ ತಪ್ಪಿದ್ದಲ್ಲ. ಈ ವಿನ್ನೆಲೆಯಲ್ಲಿಯೇ ಬಸವಣ್ಣ `ಇಂದಿಂಗೆ ನಾಳಿಂಗೆ ಬೇಕೆಂದೆನಾದಡೆರೆ ನಿಮ್ಮಾಣೆ, ನಿಮ್ಮ ಪ್ರಮಥರಾಣೆ' ಎಂದರು. ಕಾಯಕ ಮತ್ತು ದಾಸೋಹಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಮತ್ತೆ ಕಲ್ಯಾಣದ ಕಾರ್ಯಕ್ರಮಗಳು ಮತ್ತೆ, ಮತ್ತೆ ನಡೆಯಬೇಕು. ನಿತ್ಯ ಕಲ್ಯಾಣ ಆಗುವವರೆಗೂ ನಡೆಯಬೇಕು. ಬಸವೇಶ್ವರನಷ್ಟೇ ಬುದ್ಧರೂ ಆರಾಧ್ಯ ವ್ಯಕ್ತಿ. ಬುದ್ಧನಿಂದ ಬಸವನಡೆಗೆ ಬಂದಿದ್ದೇವೆ. ಬಸವನಿಂದ ಅಂಬೇಡ್ಕರ್‌ರವರೆಗೆ ಸಾಗಬೇಕಿದೆ ಎಂದರು.
`ಶರಣರ ಕ್ರಾಂತಿಯ ಅನನ್ಯತೆ' ಕುರಿತು ಡಾ. ಆರ್ ಕೆ ಹುಡುಗಿ ಮಾತನಾಡಿ ಮನುಷ್ಯತ್ವದ ಬರಗಾಲದಲ್ಲಿ ನಾವು ಬದುಕುತ್ತಿದ್ದೇವೆ. ಮನುಷ್ಯತ್ವವನ್ನು ಯಾವುದೇ ಅಂಗಡಿಗಳಲ್ಲಿ ಕೊಳ್ಳಲು ಸಾಧ್ಯವಿಲ್ಲ. ಮನುಷ್ಯತ್ವ ಒಳಗಿನಿಂದಲೇ ಹುಟ್ಟಬೇಕು. ಮನುಷ್ಯತ್ವ ಹುಟ್ಟಿಸುವ ನಿಟ್ಟಿನಲ್ಲಿ ಸಣ್ಣ ಹೆಜ್ಜೆ ಈ ಮತ್ತೆ ಕಲ್ಯಾಣ. ನಾಡಿಗೇ ಅನ್ನ ನೀಡುವ ಅನ್ನದಾತರು ಸಾವಿರ-ಸಾವಿರ ಸಂಖ್ಯೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು, ಇದಕ್ಕಾಗಿ ಜನಪ್ರತಿನಿಧಿಗಳಾದವರು ಒಂದೇ ಒಂದು ಹನಿ ಕಣ್ಣಿರು ಹಾಕಿಲ್ಲ, ಶೋಕಾಚಾರಣೆ ಮಾಡಿಲ್ಲವೆಂದರೆ ಮನುಷ್ಯತ್ವ ಇದೆಯಾ? ಜನಪರವಾದ ಎಷ್ಟೇ ದೊಡ್ಡ ದೊಡ್ಡ ಕಾರ್ಯಕ್ರಮಗಳು ನಡೆದರೂ ಒಂದು ಸಾಲಿನ ಸಣ್ಣ ಪ್ರಚಾರವೂ ಸಿಕ್ಕಿಲ್ಲ್ಲ. ಶ್ರೀಮಂತ ಮಠದ ಸ್ವಾವಿ ಸೀತರೆ, ಕೆವಿದರೂ ಹೆಡ್ ಲೈನ್ ಹಾಕುವ ಮಾಧ್ಯಮಗಳು ಅಧಮ ಸ್ಥಾನಕ್ಕೆ ಹೋಗಿವೆ. ಮನುಷ್ಯತ್ವ ಸತ್ತಿದ್ದಕ್ಕೆ ಇದಕ್ಕಿಂತ ನಿದರ್ಶನ ಬೇಕಿಲ್ಲ. ಕುರುಡು ಭಕ್ತಿಂದ ಶರಣರ ಆಂದೋಲವನ್ನು ವೈಭವಿಕರಿಸುವುದು ಸಲ್ಲ. ಅಸಮಾನತೆಯ ವಿರುದ್ದ ೧೨ ನೆಯ ಶತಮಾನದಲ್ಲಿ ಶರಣರು ಕ್ರಾಂತಿ ಮಾಡಿದರು. ಜರ್ಮನಿ, ಪ್ರಾನ್ಸ್, ಚೀನ, ರಶ್ಯದಲ್ಲಿ ನಡೆದ ಕ್ರಾಂತಿಗಳು ಬೇಕಾದ್ಟವೆ. ಆದರೆ ಈ ಯಾವ ಕ್ರಾಂತಿಗಳೂ ಶರಣ ಕ್ರಾಂತಿಯಂತೆ ಬದುಕಿನ ಎಲ್ಲ ಆಯಾಮಗಳನ್ನು ಚಳುವಳಿಯ ಭಾಗವಾಗಿ ತೆಗೆದುಕೊಂಡ ಉದಾಹರಣೆಗಳಿಲ್ಲ. ಕ್ರಾಂತಿ ಯುದ್ದವಲ್ಲ; ಒಂದು ಪ್ರಕ್ರಿಯೆ. ಕ್ರಾಂತಿಗಳು ವಿಪಲವಾಗಿಲ್ಲ; ವಿನ್ನಡೆ ಮಾತ್ರ ಆಗಿರಬಹುದು. ಶರಣರು ಕ್ರಾಂತಿಯನ್ನು ಆರಂಭಿಸಿದ್ದು ಅಕ್ಷರ ಕಲಿಸುವ ಮೂಲಕ. ಇಂದಿನಷ್ಟು ಕಲಿಕೆಯ ಸಾಧನ-ಸೌಲಭ್ಯಗಳು ಇಲ್ಲದೇ ಇರುವ ಸಂದರ್ಭದಲ್ಲಿ ಶರಣರು ಅದ್ಭುತವಾದ ಶಿಕ್ಷಣ ಕೊಟ್ಟರು. ಬದುಕಿನ ಗಹನತೆಯನ್ನು ಅನುಭವಿಸಿ ಸರಳವಾಗಿ ನಿರ್ವಚಿಸಿದರು. ವಚನಗಳಿಗಿಂತ ಸರಳವಾಗಿ ಬರೆಯಲು ಸಾಧ್ಯವಿಲ್ಲ. ಇಂದು ದೇಶದಲ್ಲಿ ಕೋಟ್ಯಾಂತರ ಶಿಕ್ಷಕರಿದ್ದರೂ ಶೇ. ೧೦೦ ಸಾಕ್ಷರರನ್ನಾಗಿಸಲು ಸಾಧ್ಯವಾಗಿಲ್ಲ. ಅಂದರೆ ಶರಣರಿಗೆ ಇದ್ದ ಬದ್ದತೆ, ಕಾಳಜಿ ಇಂದಿನ ಶಿಕ್ಷಕರಿಗೆ ಇಲ್ಲ. ದನಗಾವಿ ರಾಮಣ್ಣ ಬರೆದಂತಹ ವಚನಗಳ ಮೇಲೆ ಇಂದಿನ ವಿದ್ಯಾರ್ಥಿಗಳು ವಿಶ್ವವಿದ್ಯಾಲಯಗಳಲ್ಲಿ ಪಿ ಹೆಚ್ ಡಿ ಮಾಡುತ್ತಿದ್ದಾರೆ. ಪ್ರಸಿದ್ಧ ಆಕ್ಷಪರ್ಡ್, ಕೇಂಬ್ರಿಜ್ ವಿಶ್ವವಿದ್ಯಾಲಯಗಳಲ್ಲೂ ೧೯೨೮ ರ ತನಕ ಮವಿಳೆಯರಿಗೆ ಪ್ರವೇಶವಿರಲಿಲ್ಲ. ೧೨ ನೆಯ ಶತಮಾನದಲ್ಲಿಯೇ ಮವಿಳೆಯರಿಗೆ ಶಿಕ್ಷಣ ನೀಡಿದವರು ಶರಣರು. ಜಗತ್ತಿನ ಯಾವ ಧರ್ಮದ ಸಂಸ್ಥಾಪಕನೂ ತನ್ನನ್ನು ತಾನು ಕೀಳಾಗಿರಿಸಿಕೊಂಡಿರುವ ಉದಾಹರಣೆಗಳೇ ಇಲ್ಲ. ಬಸವಣ್ಣ ತಾನು ಮಾದಾರ ಚೆನ್ನಯ್ಯನೆಯ ದಾಸ, ಡೋಹರ ಕಕ್ಕಯ್ಯನ ಮನೆಯ ದಾಸಿಯ ಮಕ್ಕಳು ಬೆರಣಿಯನ್ನು ಆಯಲು ಹೋದಾಗ ಸಂಗವ ಮಾಡಿದ್ದರ ಫಲವಾಗಿ ಕೂಡಲಸಂಗಮದೇವ ಸಾಕ್ಷಿಯಾಗಿ ನಾನು ಹುಟ್ಟಿದೆ ಹೇಳಿದರು. ಇದಕ್ಕೆ ಕಾರಣ ಅವರಲ್ಲಿರುವ ಕೀಳರಿಮೆ ಕಳೆಯಲು. ಎನಗಿಂತ ಕಿರಿಯರಿಲ್ಲ; ಶಿವಭಕ್ತರಿಗಿಂತ ವಿರಿಯರಿಲ್ಲ ಎಂದು ವಿನಯವಂತಿಕೆಯನ್ನು ತೋರಿಸಿದರು. ಕಾಯಕ ಜೀವಿಗಳನ್ನು ಪ್ರೋತ್ಸಾವಿಸಿ ಅದ್ಭತವಾಗಿ ಬೆಳೆಸಿದರು. ೧೨ ನೆಯ ಶತಮಾನದಲ್ಲಿಯೇ ೨೫೦ ಜನ ಒಟ್ಟಿಗೆ ಸಾವಿರ ಸಾವಿರ ಕವಿತೆಗಳನ್ನು ಬರೆದು ಕಲ್ಯಾಣವನ್ನು ಪಕ್ಷಿಧಾಮವನ್ನಾಗಿ ಮಾಡಿದರು. ಇಂದು ಶರಣರು ಕಂಡ ಕನಸನ್ನು ನನಸು ಮಾಡುವ ಅವಶ್ಯಕತೆದೆ. ಇದಕ್ಕಾಗಿ ನಾವು ಕಲ್ಯಾಣದ ಸತ್ವ, ಭಾವವನ್ನು ಅಂತರ್ಗತ ಮಾಡಿಕೊಂಡು ಅದನ್ನು ಮತ್ತೆ ಜಾರಿಗೊಳಿಸೇ ತೀರುತ್ತೇವೆ ಎನ್ನುವ ಹಠಕ್ಕೆ ಬೀಳಬೇಕು. ಆಗ ಮಾತ್ರ ಶರಣರ ಕ್ರಾಂತಿ ಸಾರ್ಥಕವಾಗವುದು ಎಂದರು.
`ಸಾಮಾಜಿಕ ಬದಲಾವಣೆ - ವಚನಕಾರ್ತಿಯರು' ಕುರಿತು ಧು ಸರಸ್ವತಿ ಮಾತನಾಡಿ ಮಾತನಾಡಲು ಅವಕಾಶ ಸಿಕ್ಕಿದ್ದು ನನಗೆ ಸಂದ ದೊಡ್ಡ ಗೌರವ. ಸಾಣೇಹಳ್ಳಿ ಶ್ರೀಗಳು ಪ್ರಜಾಪ್ರಭುತ್ವದ ರೀತಿಯಲ್ಲಿ ಮಠವನ್ನು ಕಟ್ಟಿದವರು. ಯಾವುದೇ ಕ್ರಾಂತಿಯೂ ಮವಿಳೆಯರಿಲ್ಲದೆ ಹೋದರೆ ಪರಿಪೂರ್ಣವಾಗುವುದಿಲ್ಲ. ಮವಿಳೆ ತನ್ನ ಶಕ್ತಿ, ಸಾಮರ್ಥ್ಯ ಚೈತನ್ಯವನ್ನು ಆಧಾರಿಸಿ ಹೋರಾಟದಲ್ಲಿ ಭಾಗವವಿಸಬೇಕೇ ವಿನಾ ಒತ್ತಡಗಳಿಂದಲ್ಲ. ಹೆಣ್ಣುಮಕ್ಕಳಲ್ಲಿರುವಷ್ಟು ಶಕ್ತಿ, ಚೈತನ್ಯ ಗಂಡಸರಿಗಿಲ್ಲ. ಆಕೆ ಏಕಕಾಲಕ್ಕೆ ಹತ್ತು ಜನ ಮಾಡುವ ಕೆಲಸ ಮಾಡುವಳು. ಇಂಥ ಮವಿಳೆಯರ ಶಕ್ತಿಯನ್ನು ಯಾವ ಕ್ರಾಂತಿಗಳೂ ಸಮರ್ಥವಾಗಿ ಬಳಸಿಕೊಂಡಿಲ್ಲ. ಭಾರವಿಲ್ಲದೇ ಇರುವ ಹೆಣ್ಣುಮಕ್ಕಳನ್ನು ನೋಡಿಯೇಲ್ಲ. ನಾನು ಯಾವ ಧರ್ಮವನ್ನೂ ಆಚರಿಸುವವಳಲ್ಲ ಆದರೂ ನನಗೆ ಕಲ್ಯಾಣ ಬೇಕು. ಕಲ್ಯಾಣದ ಮೂಲಕ ಅನುಭವ ಮಂಟಪ ಬೇಕು. ಎಲ್ಲ ರೀತಿಯ ತಾರತಮ್ಯವನ್ನು ತೊಡೆದು ಹಾಕಿದ ಮತ್ತೆ ಕಲ್ಯಾಣ ಬೇಕು. ಶರಣರು ಶ್ರವಿಕರ ಕೈಯಲ್ಲಿ, ಮವಿಳೆಯರ ಕೈಯಲ್ಲಿ ಸೃಜನಶೀಲ ಕೆಲಸಗಳನ್ನು ಮಾಡಿಸಿದರು. ಬದಲಾವಣೆ ಬೇಕು ಅನ್ನುವುದು ಈಗ ಇರುವುದು ಸರಿಲ್ಲ ಎನ್ನವು ಕಾರಣಕ್ಕೆ. ಜ್ಞಾನಕ್ಕೆ ಗಂಡು-ಹೆಣ್ಣುಗಳೆಂಬ ತಾರತಮ್ಯ ಸರಿಯಲ್ಲ. ಜಾತಿ ಕ್ಯಾನ್ಸರ್ ಇದ್ದಂತೆ. ನನ್ನ ಕಾಯಕ ಮಾತ್ರ ಶ್ರೇಷ್ಠ ಎನ್ನುವ ಪುರುಷರ ಅಹಂಕಾರ ನೀಗಬೇಕು. ಲಿಂಗ ತಾರತಮ್ಯ ಹೋಗಬೇಕು. ಕದಿರಮ್ಮೆಯ `ಎನ್ನ ಗಂಡಗೆ ಅಂಡದ ಬೀಜವಿಲ್ಲ' ಎನ್ನುವ ಮಾತು ಎಲ್ಲ ಗಂಡಸರಿಗೂ ಚಾಟಿ ಏಟಿನಂತಿದೆ. ಸಂಕೇತಗಳೇ ಗಂಡು ಹೆಣ್ಣು ಆಗುವುದಿಲ್ಲ. ಬಹಳ ದೊಡ್ಡದು ಲಿಂಗ ಸಮನತೆಯ ತತ್ವ. ಶ್ರಮ ಸಂಸ್ಕೃತಿಯನ್ನು ಗೌರವಿಸದೆ ಯಾವ ಕ್ರಾಂತಿಯೂ ಸಫಲವಾಗುವುದಿಲ್ಲ. ಆಯ್ದಕ್ಕಿ ಲಕ್ಕಮ್ಮ ತನ್ನ ದುಡಿಮೆಯನ್ನು ಆಧರಿಸಿ ಮಾತ್ರ ಉಣ್ಣಬೇಕು ಎಂದಳು. ಸತ್ಯಕ್ಕನ ವ್ರvವೆಣದರೆ `ನಾನಿರುವ ಮನೆಯ ಅಂಗಳವೇ ದೇವರಿರುವ ಜಾಗ' ಎನ್ನುವುದು. ಆದರೆ ಇಂದು ಎಷ್ಟು ದುಡ್ಡನ್ನು ಸಂಪಾದಿಸುತ್ತೇವೆಯೋ ಅದರ ಮೇಲೆ ಯಶಸ್ಸು ನಿಂತಿದೆ ಎನ್ನುವ ಭ್ರಮೆಯಲ್ಲಿ ನಾವಿದ್ದೇವೆ. ನೆಮ್ಮದಿಯ ನಿದ್ದೆ ದುಡಿದು ಉಣ್ಣುವುದರಲ್ಲಿದೆ. ಮತ್ತೆ ಕಲ್ಯಾಣ ರಾಜ್ಯ ಅಷ್ಟೇ ಅಲ್ಲ; ದೇಶಕ್ಕೆ, ಜಗತ್ತಿಗೇ ಹೋಗಬೇಕಾಗಿದೆ. ಇಂಥ ಸಂಘಟನೆ ಕಷ್ಟ. ಆದರೂ ಇಂಥ ಸಂಘಟನೆಯಲ್ಲಿ ನಮಗೂ ಜವಾಬ್ದಾರಿಕೊಟ್ಟರೆ ವೇದಿಕೆಯ ಮೇಲೆ ಭಾಷಣ ಮಾಡುವುದರಿಂದ ವಿಡಿದು ಕಸ ಹೊಡೆಯುವ ಕೆಲಸವನ್ನೂ ಮಾಡುವೆವು. ಅಂತ ಅವಕಾಶ ಸ್ವಾವಿಗಳು ನಮಗೆ ಕಲ್ಪಿಸಬೇಕು ಎಂದರು.
ಆರಂಭದಲ್ಲಿ ಶಿವಸಂಚಾರದ ಕಲಾವಿದರು ವಚನಗೀತೆಗಳನ್ನು ಹಾಡಿದರು. ಶಂಭು ಹೆಗಡಾಳ್ ಸ್ವಾಗತಿಸಿದರೆ, ಕೀರ್ತಿವತಿ ನಿರ್ವವಿಸಿದರು. ಕಾರ್‍ಯಕ್ರಮದ ನಂತರ ಸಾಣೇಹಳ್ಳಿಯ ಶಿವಸಂಚಾರ ತಂಡದಿಂದ 'ಮೋಳಿಗೆ ಮಾರಯ್ಯ' ನಾಟಕ ಪ್ರದರ್ಶಗೊಂಡಿತು. ನಾಟಕ ಮುಗಿದ ಮೇಲೆ ಪ್ರೇಕ್ಷಕರು ನಾಟಕದ ಬಗೆಗಿನ ಅಭಿಪ್ರಾಯಗಳನ್ನು ಹಂಚಿಕೊಂಡರು. ನೆರೆ ಸಂತ್ರಸ್ತರ ನಿಧಿಗೆ ನಾಲ್ಕು ಸಾವಿರ ರೂಪಾಗಳು ಸಂಗ್ರಹವಾತು.
ಕಲಾಭವನದ ಆವರಣದಿಂದ ಸಾಮರಸ್ಯ ನಡಿಗೆ ಆರಂಭವಾತು. ಜನಪ್ರತಿನಿಧಿಗಳು, ವಿವಿಧ ಧಾವಿಕ ಮುಖಂಡರು, ವಿದ್ಯಾರ್ಥಿಗಳು, ಕಲಾ ತಂಡಗಳು, ವಚನಕಾರರ ಸ್ಥಬ್ಧ ಚಿತ್ರಗಳನ್ನೊಳಗೊಂಡ ವಿಶೆಷ ವಾಹನಗಳೊಂದಿಗೆ ಪಾಪು ಸಭಾಭವನಕ್ಕೆ ಬಂದು ತಲುಪಿದರು.
- ದ್ಯಾಮೇಶ್ ಹೆಚ್ ಎಸ್
ವಿದ್ಯಾರ್ಥಿಗಳೊಂದಿಗೆ ಸಂವಾದ
ಆಗಸ್ಟ್ ೨೮, ವಿಜಯಪುರ; ಇಲ್ಲಿನ ಎಂ ಬಿ ಪಾಟೀಲ್ ವೈದ್ಯಕೀಯ ಕಾಲೇಜಿನ ಗ್ರಂಥಾಲಯ ಸಭಾಂಗಣದಲ್ಲಿ 'ಮತ್ತೆ ಕಲ್ಯಾಣ' ಕಾರ್‍ಯಕ್ರಮದ ನಿವಿತ್ತ ಏರ್ಪಡಿಸಿದ್ದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್‍ಯಕ್ರಮದಲ್ಲಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾವಿಗಳು ಪ್ರಶ್ನೆಗಳಿಗೆ ಉತ್ತರಿಸುತ್ತಾ ಶಿಷ್ಯನಾದವನು ದಿನದಿಂದ ದಿನಕ್ಕೆ ದೈವಿಕ ಪ್ರಗತಿಯ ಜೊತೆಗೆ, ಶೈಕ್ಷಣಿಕವಾಗಿ, ಆಧ್ಯಾತ್ಮಿಕವಾಗಿ, ನೈತಿಕವಾಗಿ ಬೆಳೆದರೆ ಕಲಿಸಿದ ಗುರುವಿಗೆ ಸಂತೋಷ. ಇಂತಹ ಶಿಕ್ಷಣ ಇಂದು ದೊರಕದಿರುವುದು ದುರದೃಷ್ಟಕರ ಸಂಗತಿ. ಇವತ್ತು ಶಿಕ್ಷಣ ಪದ್ಧತಿಯಲ್ಲಿ ದೋಷವಿದೆ. ೧೨ನೆಯ ಶತಮಾನದಲ್ಲಿ ಶರಣರು ಯಾವುದೇ ಕಾಲೇಜಿನ ಮೆಟ್ಟಿಲು ತುಳಿದವರಲ್ಲ. ಅವರು ಬದುಕಿನ ಮೂಲಕ ಅನುಭವವನ್ನು ಪಡೆದು ಅನುಭಾವಿಗಳಾದರು. ದೊಡ್ಡ ದೊಡ್ಡ ಪದವಿಗಳಿಸಿದವರ ನೈತಿಕ ನೆಲೆಗಟ್ಟು ಕುಸಿದಿದೆ. ಸಿಕ್ಕಿದ್ದೆಲ್ಲವನ್ನೂ ಕಬಳಿಸುವ ಬಕಾಸುರರಾಗಿದ್ದಾರೆ. ದಿಕ್ಕು ತೋರಿಸುವವರೇ ದಿಕ್ಕು ತಪ್ಪಿದರೆ ಮುಂದಿನ ಪೀಳಿಗೆಗೆ ದಿಕ್ಕನ್ನು ತೋರುವವರು ಯಾರು? ವಿಜ್ಞಾನ, ತಂತ್ರಜ್ಞಾನ ಮುಂದುವರೆದಿದೆ. ಗುರುವಾದವನು ಶಿಷ್ಯನ ಸರ್ವಾಂಗೀಣ ವಿಕಾಸಕ್ಕೆ ದಾರಿ ತೋರಿಸಬೇಕು. ಅರಿವಿಗೆ ತಕ್ಕ ಆಚರಣೆ ಇರಬೇಕು. ಮನೆಯಲ್ಲಿನ ನಮ್ಮ ಕೃಕರು ಬಹುತೇಕ ಅಕ್ಷರಸ್ಥರಲ್ಲ. ಆದರೆ ಅನುಭವದ ಮೂಲಕ ಯಶಸ್ಸನ್ನು ಕಂಡುಕೊಂಡರು. ತತ್ವದ ಜೊತೆ ಪ್ರಾಯೋಗಿಕವೂ ಮುಖ್ಯವಾಗಬೇಕು. ವಿದ್ಯಾರ್ಥಿಗಳಿಗೆ ವ್ಯಾವಹಾರಿಕ, ಔದ್ಯೋಗಿಕ ಮತ್ತು ಪಾರಮಾರ್ಥಿಕ ಶಿಕ್ಷಣ ಬೇಕು. ಎಲ್ಲರ ಹುಟ್ಟಿನ ಗುಟ್ಟು ಒಂದೇ. ಆದರೆ ಸಾಧನೆಯ ಮೂಲಕ ಯಾರಾದರೂ ಎತ್ತರಕ್ಕೆ ಏರಬೇಕು. 'ಗುರುವಾದಡೂ ಕಾಯಕದಿಂದಲೇ ಜೀವನ್ಮುಕ್ತಿ' ಎನ್ನುವ ಮೂಲಕ ಪ್ರತಿಯೊಬ್ಬರೂ ಕಾಯಕಶ್ರದ್ಧೆಂiನ್ನು ಬೆಳೆಸಿಕೊಳ್ಳಬೇಕು ಎನ್ನುವ ಸಂದೇಶ ಸಾರಿದರು. ಪದವಿಧರರಾಗುವುದು ಮುಖ್ಯವಲ್ಲ; ಜೊತೆಗೆ ನೈತಿಕ ನೆಲೆಗಟ್ಟನ್ನು ಬೆಳೆಸಿಕೊಂಡು ಬದುಕನ್ನು ಭದ್ರಗೊಳಿಸಿಕೊಳ್ಳಬೇಕು. ಸಂವಾದ ಘರ್ಷಣೆಗೆ ಕಾರಣವಾಗುವುದಿಲ್ಲ. ಅದು ಗಂಧದ ಕೊರಡಾಗಿ ಪರಿವರ್ತನೆಯಾಗುವುದು. 'ಮತ್ತೆ ಕಲ್ಯಾಣ' ಅಜ್ಞಾನವನ್ನು ತೊಳೆದು ಸುಜ್ಞಾನಿಯನ್ನಾಗಿಸುವುದು.
ತನುವನ್ನು ಗುರುವಿಗೆ, ಮನವನ್ನು ಲಿಂಗಕ್ಕೆ, ಧನವನ್ನು ಜಂಗಮಕ್ಕೆ ಸಮರ್ಪಿಸಿ ಬದುಕನ್ನು ಸಾರ್ಥಕಗೊಳಿಸಿಕೊಳ್ಳಬೇಕು. ಅರಿವು-ಆಚಾರಗಳೆರಡೂ ಒಂದಾದವನೇ ನಿಜವಾದ ಜಂಗಮ. ಗುಡಿಗುಂಡಾರಗಳು ವಿಪರೀತವಾಗಿ ಜನರನ್ನು ಮೂಢತನಕ್ಕೆ ಎಳೆಯುತ್ತಿದೆ. ಇದನ್ನು ಮನಗಂಡೇ ಶರಣರು ಗುಡಿಗುಂಡಾರಗಳನ್ನು ತಿರಸ್ಕಾರ ಮಾಡಿ ದೇಹವನ್ನೆ ದೇವಾಲಯ ಮಾಡಿಕೊಂಡು ಆತ್ಮವನ್ನೆ ದೇವರನ್ನಾಗಿ ಮಾಡಿಕೊಂಡರು. ಸಮಾನತೆಯ ಪರ್ಯಾಯ ಪದವೇ ಲಿಂಗಾಯತ. ಶರಣರ ವಚನಗಳಿಗೂ ಭಗವದ್ಗೀತೆಯ ಶ್ಲೋಕಗಳಿಗೂ ತುಂಬಾ ವ್ಯತ್ಯಾಸವಿದೆ. ಶರಣರ ದ್ಟೃಯಲ್ಲಿ ಕಾಯಕ ಮಾಡಿದ ಕೂಡಲೇ ಅಂಗೈಯಲ್ಲಿಯೇ ಪ್ರತಿಫಲವನ್ನು ಪಡೆದುಕೊಳ್ಳಬಹುದು ಎಂದರು. ಆದರೆ ಕೆಲಸವನ್ನು ಮಾಡುವುದು ಮಾತ್ರ ನಿನ್ನ ಹಕ್ಕು. ಅದರಿಂದ ಫಲಾಪೇಕ್ಷೆಯನ್ನು ಪಡೆಯಬಾರದೆಂದು ಭಗವದ್ಗೀತೆಯಲ್ಲಿದೆ. ಅರಿತಡೆ ಶರಣ ಮರೆತರೆ ಮಾನವ. ಮೊದಲು ನಿನ್ನನ್ನು ನೀನು ಅರಿತು ನಂತರ ಸಮಾಜವನ್ನು ಅರಿತುಕೊಳ್ಳಬೇಕು. ಎಲ್ಲಾ ಧರ್ಮಗಳ ಸಾರ ಒಂದೇ. ಧರ್ಮಗಳ ಅನುಯಾಗಳಿಂದ ಹೆಚ್ಚು ಹೆಚ್ಚು ಸಂಘರ್ಷಗಳುಂಟಾಗುತ್ತಿವೆ. ಅರಿವಿನ ಜೊತೆಗೆ ಆಚರಣೆ ಇರಬೇಕು. ಅನುಭವ ಮಂಟಪ ಸ್ಥಾವರ ಕಟ್ಟಡವಲ್ಲ; ಜಂಗಮ ಸ್ವರೂಪವಾದದ್ದು. ಶರಣರು ಬದುಕಿನ ಅನುಭವಗಳನ್ನು ಚರ್ಚಿಸುವ ತಾಣವೇ ಅನುಭವ ಮಂಟಪ. ಶರಣರ ಬದುಕಿನ ಅನುಭಾವದ ರಸಗಟ್ಟಿಗಳೇ ವಚನಗಳು. ಹೊಟ್ಟೆಯ ಹಸಿವಿಗೆ ಆಹಾರ ಎಷ್ಟು ಮುಖ್ಯವೋ ಆತ್ಮದ ಹಸಿವಿಗೆ ಆಧ್ಯಾತ್ಮವೂ ಅಷ್ಟೇ ಅವಶ್ಯಕ. ವಿದ್ಯಾರ್ಥಿಗಳು ಜಾತ್ಯಾತೀತ ರಾಷ್ಟ್ರನಿರ್ಮಾಣ ಮಾಡುವ, ಕಾಯಕ ಶ್ರದ್ಧೆಯನ್ನು ಬೆಳೆಸಿಕೊಳ್ಳುವ, ದಾಸೋಹ ಪ್ರಜ್ಞೆಯನ್ನು ಬೆಳೆಸಿಕೊಳ್ಳುವ ಸಂಕಲ್ಪ ಮಾಡಿ ಅದರಂತೆ ನಡೆದರೆ 'ಮತ್ತೆ ಕಲ್ಯಾಣ' ಅಭಿಯಾನ ಸಾರ್ಥಕವಾಗುವುದು.
ಶ್ರೀ ತೋಂಟದಾರ್ಯ ಶ್ರೀಮಠದ ಶ್ರೀ ಸಿದ್ಧರಾಮ ಸ್ವಾವಿಜಿ ಮಾತನಾಡಿ ಬಸವಣ್ಣನವರು ಸಮಾಜದ ಬಗ್ಗೆ ಅತ್ಯಂತ ಕಾಳಜಿಯನ್ನಿಟ್ಟುಕೊಂಡವರು. ಬಸವಣ್ಣನವರ ವಚನಗಳು ಅಂತರಂಗ ಬದುಕಿಗೆ ಸಹಕಾರಿಯಾಗಿವೆ. ಅಂಧಶ್ರದ್ಧೆ, ಮೂಢನಂಬಿಕೆ, ಕಂದಾಚಾರಗಳನ್ನು ತೊಲಗಿಸುವ ಮೂಲಕ ಸಮ ಸಮಾಜದ ಕನಸು ನನಸು ಮಾಡುವ ತುಡಿತವಿತ್ತು. ನಮ್ಮ ದೇಶದಲ್ಲಿ ಬಹುಮುಖ್ಯವಾಗಿ ಕಾಡುವಂಥ ಪಿಡುಗು ಜಾತಿ. ಆದರೆ ೧೨ನೆಯ ಶತಮಾನದಲ್ಲಿ ಜಾತಿಗೆ ಮಹತ್ವವಿರದೇ ವ್ಯಕ್ತಿತ್ವಕ್ಕೆ ಮಹತ್ವವಿತ್ತು. ಕಾಯಕ ಮಾಡುವವರೆಲ್ಲರೂ ಸಮಾನರು ಎಂದು ಸಾರಿದರು. ಇಂಥ ಜಾತೀಯತೆಯ ಭಾವನೆಯನ್ನು ತೊಲಗಿಸುವ ಸಲುವಾಗಿಯೇ `ಮತ್ತೆ ಕಲ್ಯಾಣ' ಕಾರ್ಯಕ್ರಮ ಹವಿಕೊಂಡಿರುವುದು. ಜಾತಿ ವ್ಯವಸ್ಥೆಂದಾಗಿ ಸಂಘರ್ಷ, ತಾರತಮ್ಯ ಉಂಟಾಗಿ ಸಮಾಜದಲ್ಲಿ ಅಸಮಾನತೆಯಂಟಾಗುತ್ತಿರುವುದು ನೋವಿನ ಸಂಗತಿ. ಜಾತಿ ಬೇರೆ, ಧರ್ಮ ಬೇರೆ. ಧರ್ಮ ಜಾತಿಯನ್ನು ಹೋಗಲಾಡಿಸುತ್ತದೆ. ಬಸವಣ್ಣನವರು ಜಾತಿಯನ್ನು ಬೋಧಿಸದೇ ಧರ್ಮವನ್ನು ಬೋಧಿಸಿದರು. ಲಿಂಗಾಯತ ಮತ್ತು ವಿಂದೂ ಧರ್ಮ ಬೇರೆ ಬೇರೆ. ವಿಂದು ಎನ್ನುವುದು ಪ್ರಾದೇಶಿಕ ಹೆಸರು. ಇದನ್ನೇ ಬಳಸಿಕೊಂಡು ಪುರೋವಿತಶಾವಿ ವರ್ಗ ಸ್ಥಾವರಲಿಂಗವನ್ನು ಪೂಜಿಸಿ ಮೌಢ್ಯತೆಯನ್ನು ಬಿತ್ತುತ್ತಿದ್ದಾರೆ. ಲಿಂಗಾಯತ ಎನ್ನುವುದು ತತ್ವ, ಸಿದ್ಧಾಂತ. ಅದು ಜಂಗಮ ಸಿದ್ಧಾಂತ. ತನ್ನ ದೇಹವನ್ನೇ ದೇವಾಲಯ ಮಾಡಿಕೊಡು ಆತ್ಮವನ್ನೇ ದೇವರು ಮಾಡಿಕೊಂಡರು. ದೇವಸ್ಥಾನಗಳಲ್ಲಿ ಮೂರ್ತಿ ಪೂಜೆಯನ್ನು ನೇರವಾಗಿ ಮಾಡುವಂತಿಲ್ಲ. ಮಧ್ಯವರ್ತಿಂದ ಪೂಜಿಸಬೇಕು. ಇದನ್ನು ತಪ್ಪಿಸುವುದಕ್ಕಾಗಿ ಬಸವಣ್ಣನವರು ಅಂಗೈಯಲ್ಲಿ ಲಿಂಗವನ್ನು ಕರುಣಿಸಿದರು. ಒಬ್ಬ ವ್ಯಕ್ತಿಗೆ ವಿನಯ ಗುಣವಿದ್ದರೆ ಎತ್ತರ ಸ್ಥಾನಕ್ಕೆ ಹೋಗುವುದರಲ್ಲಿ ಅನುಮಾನವೇ ಇಲ್ಲ. ಬಸವಣ್ಣನವರದು ಮುಗಿದ ಕೈ ಬಾಗಿದ ತಲೆ. `ಎನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂತ ವಿರಿಯರಿಲ್ಲ, ಭಕ್ತಿಲ್ಲದ ಬಡವ ನಾನಯ್ಯ' ಎಂದು ವಿನಯವಂತಿಕೆಯನ್ನು ತೋರಿಸಿದರು. ಲಿಂಗಾಯತ ಸಾಧಕನು ಭಗವಂತನನ್ನು ಒಲಿಸಿಕೊಳ್ಳಲು ಅಷ್ಟಾವರಣ, ಷಟ್‌ಸ್ಥಲ, ಪಂಚಾಚಾರಗಳನ್ನು ರೂಢಿಸಿಕೊಳ್ಳಬೇಕು. ಬೋಧನೆಗಿಂತ ಆಚರಣೆ ಮುಖ್ಯ. ಆಚರಣೆ ತರುವಂಥದ್ದೇ ಮತ್ತೆ ಕಲ್ಯಾಣ ಎಂದರು.
ಶ್ರೀ ಸಿದ್ಧಲಿಂಗಸ್ವಾವಿಗಳು ಮಾತನಾಡಿ ಮಾನವಿಯತೆಯ ತಳಹದಿಯ ಮೇಲೆ ನಿಂತಿರುವುದೇ ಧರ್ಮ. ಇದು ಸಕಲ ಜೀವಾತ್ಮರೊಂದಿಗೆ ಸಾಮರಸ್ಯದಿಂದ ಬದುಕುವುದನ್ನು ಹೇಳಿಕೊಡುವುದು.
ವೇದಿಕೆಯ ಮೇಲೆ ಶರಣ ಬಸವದೇವರು, ಡಾ. ಮಹಾಂತೇಶ ಬಿರಾದಾರ, ಡಾ. ಎಂ ಎಸ್ ಮದಬಾವಿ ಇದ್ದರು. ಸಂಗಮೇಶ್ವರ ಬಬಲೇಶ್ವರ ಸ್ವಾಗತಿಸಿದರೆ, ಡಾ ಉಷಾದೇವಿ ನಿರೂಪಿಸಿದರು. ಶಿವಸಂಚಾರ ಕಲಾವಿದರು ವಚನಗೀತೆಗಳನ್ನು ಹಾಡಿದರು.
ಸಂವಾದದಲ್ಲಿ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳು
೧೨ನೆಯ ಶತಮಾನದ ಸಮಾನತೆ ೨೧ನೆಯ ಶತಮಾನದಲ್ಲಿ ಏಕೆ ಸಾಧ್ಯವಾಗಿಲ್ಲ?
ತನು, ಮನ, ಧನ ಗುರು, ಲಿಂಗ ಇವುಗಳ ತಾತ್ಪರ್ಯವೇನು?
ಮತ್ತೆ ಕಲ್ಯಾಣ ಕಾರ್ಯಕ್ರಮದ ಮೂಲಕ ನಮ್ಮ ಕಲ್ಯಾಣ ಸಾಧ್ಯವೇ?
ಲಿಂಗಾಯತ ಸಮಾಜದಲ್ಲಿ ಮೋಕ್ಷ ಸಿಗುತ್ತದೆಯೇ?
೨೧ನೆಯ ಶತಮಾನದಲ್ಲಿ ದೇವರನ್ನು ನಂಬುತ್ತಿದ್ದಿಲ್ಲ. ಯಾಕೆ?
ಶರಣರು ಅಂಕಿತನಾಮಗಳನ್ನು ಯಾಕೆ ಇಟ್ಟುಕೊಳ್ಳುತ್ತಾರೆ?
ಬಸವಣ್ಣನವರ ವಚನಗಳು ನೆಮ್ಮದಿಯ ಬದುಕಿಗೆ ಹೇಗೆ ಸೂತ್ರಗಳಾಗಿವೆ?
ಜಾತಿ ಎಂದರೇನು?
ದೇಶವನ್ನು ಜಾತ್ಯತೀತವಾಗಿ ಕಟ್ಟಲು ಬಲಪಂಥೀಯರಿಂದ ಸಾಧ್ಯವೋ ಎಡಪಂಥೀಯರಿಂದ ಸಾಧ್ಯವೋ?
ಬಸವಣ್ಣನವರು ಮೇಲು ಕೀಳು ಹೋಗಲಾಡಿಸಿದರು. ೨೧ನೆಯ ಶತಮಾನದಲ್ಲಿ ಏಕೆ ಸಾಧ್ಯವಿಲ್ಲ?
ಸಾಮಾನ್ಯರಿಗೂ ಶರಣರಿಗೂ ಇರುವ ವ್ಯತ್ಯಾಸವೇನು? ಶರಣರಾಗಬೇಕಾದರೆ ಇರುವ ಅರ್ಹತೆಗಳೇನು?
ಬಸವಣ್ಣನವರು ಮೂರ್ತಿ ಪೂಜೆಯನ್ನು ತಿರಸ್ಕಾರ ಮಾಡಿದರು. ಆದರೆ ಇಂದು ಅವರನ್ನೇ ಮೂರ್ತಿ ಮಾಡಿಕೊಂಡು ಪೂಜೆ ಮಾಡುತ್ತಿರುವುದು ಎಷ್ಟು ಸರಿ?
ಧರ್ಮವೆಂದರೇನು?
ಭಕ್ತಿ ಮತ್ತು ಚಿತ್ತದ ತಾತ್ಪರ್ಯವೇನು?
ಉಪದೇಶದಿಂದ ಮತ್ತೆ ಕಲ್ಯಾಣದ ಆಶಯ ಈಡೇರುತ್ತದೆಯೇ?
ಅನುಭವ ಮಂಟಪದ ಸ್ಥಾಪನೆಯ ಉದ್ದೇಶವೇನು?
ಬಸವಣ್ಣನವರ ಕ್ರಾಂತಿ ಮತ್ತೆ ಕಲ್ಯಾಣದ ಮೂಲಕ ಸಾಧ್ಯವೇ?
ತಮ್ಮ ಪ್ರಕಾರ ವಚನ ಎಂದರೇನು?
ಹೆಣ್ಣು ಮತ್ತು ಗಂಡಿನ ಮಧ್ಯೆ ಅಸಮಾನತೆದೆ. ಇದನ್ನು ಹೋಗಲಾಡಿಸಲು ಏನು ಮಾಡಬೇಕು?
ಕರ್ಮ ಸಿದ್ಧಾಂತವೆಂದರೇನು?
ನಮಃ ಶಿವಾಯ ಮತ್ತು ಓಂ ನಮಃ ಶಿವಾಯಕ್ಕೂ ಇರುವ ವ್ಯತ್ಯಾಸವೇನು?
ರಾಜಕೀಯದಿಂದಲೇ ಅಸಮಾನತೆ ಸ್ಟೃಯಾಗಿದೆ. ಇದನ್ನು ಹೋಗಲಾಡಿಸುವುದು ಹೇಗೆ?
ಲಿಂಗಪೂಜೆಯನ್ನು ಏಕೆ ಮಾಡಬೇಕು?
೨೧ನೆಯ ಶತಮಾನದಲ್ಲಿ ಜನ ಕಾಯಕನಿಷ್ಠೆಯನ್ನು ಏಕೆ ಬೆಳೆಸಿಕೊಂಡಿಲ್ಲ?
ಆತ್ಮಾವಲೋಕನಕ್ಕೂ ಮತ್ತು ಅಂತರಂಗಕ್ಕೂ ಇರುವ ವ್ಯತ್ಯಾಸವೇನು?
ಧರ್ಮ ಧರ್ಮ ಎಂದು ಬಡಿದಾಡುವ ಬದಲು ಮಾನವ ಧರ್ಮ ಒಂದೇ ಎಂದು ಸಾರಲು ಏಕೆ ಸಾಧ್ಯವಿಲ್ಲ?
- ಹೆಚ್ ಎಸ್ ದ್ಯಾಮೇಶ್
9449649850

.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)