ಆಗಸ್ಟ್ ೨೭ ಮಂಗಳವಾರ, ಧಾರವಾಡ

ಧಾರವಾಡದಲ್ಲಿ 27ನೇ ದಿನದ ಮತ್ತೆ ಕಲ್ಯಾಣ ಆಂದೋಲನ. ಅಭಿಯಾನದಲ್ಲಿ ಸಾರ್ವಜನಿಕ ಸಮಾವೇಶ. ಅನನ್ಯ ಟಿವಿ ನೇರಪ್ರಸಾರ ವೀಕ್ಷಿಸಲು - ಕ್ಲಿಕ್ ಮಾಡಿ


ಡಾ. ಪಾಪು ಸಭಾಭವನ, ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ‘ಮತ್ತೆ ಕಲ್ಯಾಣ’ ಕರ‍್ಯಕ್ರಮದ ನಿಮಿತ್ತ ಏರ್ಪಡಿಸಿದ್ದ ಸಾರ್ವಜನಿಕ ಸಮಾವೇಶದ ನೇತೃತ್ವ ವಹಿಸಿದ್ದ ಶ್ರಿÃ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ `ಮನದಲ್ಲಿ ಮನೆಯೊಡೆಯನಿದ್ದಾನೋ ಇಲ್ಲವೋ’ ಎನ್ನುವ ಅನುಮಾನವನ್ನು ಬಸವಣ್ಣ ವ್ಯಕ್ತಪಡಿಸುತ್ತಾರೆ. ಇಲ್ಲಿ ಮನೆ-ದೇಹ, ಮನದೊಡೆಯ-ಪರಮಾತ್ಮ. ಸುಳ್ಳಿನ ಸಾಮ್ರಾಜ್ಯದಲ್ಲಿ ವಾಸಿಸುವ, ವಿಷಯ ವಾಸನೆಗಳಲ್ಲಿ ಮುಳುಗಿರುವವರ ದೇಹದಲ್ಲಿ ಖಂಡಿತ ಮನೆಯೊಡೆಯ ವಾಸಿಸುವುದಿಲ್ಲ. ಇಂಥ ಮಾನವ ಕುದುರೆಗೆ ಯಾವ ಬೆಲೆಯೂ ಇಲ್ಲ. ಹುಸಿಯನ್ನು ದೂರ ತಳ್ಳಿ, ವಿಷಯವಾಸನೆಗಳಿಂದ ಮುಕ್ತಾನಾದಾಗ ಮಾತ್ರ ಪರಮಾತ್ಮ ದೇಹವೆಂಬ ದೇಗುಲದಲ್ಲಿ ನಿಶ್ಚಿತವಾಗಿಯೂ ವಾಸಿಸುವನು. ಕಾಯಕ-ದಾಸೋಹ-ಲಿಂಗಪೂಜೆಯ ಮೈಗೂಡಿಸಿಕೊಂಡರೆ ಹಸಿವೆಂಬ ಹೆಬ್ಬಾವಿಗೆ ತೃಣಮಾತ್ರವೂ ಅವಕಾಶವಾಗುವುದಿಲ್ಲ. ಕಾಯಕ-ದಾಸೋಹ-ಲಿಂಗಪೂಜೆಯ ಪ್ರಜ್ಞೆ ಇಲ್ಲದೇ ಇರುವುದೇ ಜಗತ್ತಿನ ದುಃಸ್ಥಿಗಳಿಗೆ ಕಾರಣ. ನಿಜವಾದ ಬಂಡವಾಳಗಾರರು ಕಾಯಕ ಜೀವಿಗಳೇ ಹೊರತು ಬಂಡವಾಳ ಹಾಕಿದವರಲ್ಲ. ಶರಣ ಪರಂಪರೆ ನಾಡಿನಲ್ಲಿ ಕಾರ್ಯಗತವಾದರೆ ಯಾರೂ ಹಸಿವಿನಿಂದ ಬಳತ್ತಿರಲಿಲ್ಲ, ಇನ್ನೊಬ್ಬರ ಮೇಲೆ ಮತ್ಸರ ಕಾರುತ್ತಿರಲಿಲ್ಲ. ಮನಷ್ಯನಿಗೆ ಆಸೆ ಬೇಕು; ದುರಾಸೆಯಲ್ಲ. `ಇಂದಿಂಗೆ ನಾಳಿಂಗೆ ಬೇಕೆಂದೆನಾದಡೆ ತಲೆದಂಡ’ ಎಂದರು ಬಸವಣ್ಣ. ಈ ಬದ್ಧತೆ ನಮಗೂ ಬರಬೇಕು. ದುಡಿಯುವ ಜನ ಬಹುಸಂಖ್ಯಾತರು; ಹೊಡೆಯುವ ಜನ ಅಲ್ಪ ಸಂಖ್ಯಾತರು. ಆದರೂ ಈ ಅಲ್ಪ ಸಂಖ್ಯಾತರ ಕೈಯಲ್ಲಿಯೇ ಅರಗಿಸಿಕೊಳ್ಳಲಾಗದಷ್ಟು ಸಂಪತ್ತಿದೆ. ಕೆಲ ದೇಶಗಳಲ್ಲಿ ಆಹಾರದ ಕೊರತೆಯಿಲ್ಲ. ಅಲ್ಲಿ ಯಾರೂ ಹಸಿವಿನಿಂದ ಬಳಲುತ್ತಿಲ್ಲ. ಇದಕ್ಕೆ ಕಾರಣ ಕಾಯಕ ಶ್ರದ್ಧೆ. ಕಾಯಕದ ಜೊತೆಗೆ ದಾಸೋಹದ ತಾಯ್ತನವನ್ನೂ ಹೃದಯದಲ್ಲಿ ತುಂಬಿಕೊಳ್ಳಬೇಕು. `ಬೈದವರೆಮ್ಮ ಬಂಧುಗಳೆಂಬೆ’ ಎಂಬ ಭಾವ ಬಲಗೊಳ್ಳಬೇಕು. `ಸ್ತುತಿ ನಿಂದೆಗಳು ಬಂದರೆ ಸಮಾಧಾನಿಯಾಗಿರಬೇಕು’ ಎನ್ನುವ ವಿವೇಕವಾಣ ನಮ್ಮದೂ ಆಗಬೇಕು. ಶರಣರಲ್ಲಿರುವಷ್ಟು ಕೆಡುಕನ್ನು ತಿರಸ್ಕರಿಸುವ, ಧಿಕ್ಕರಿಸುವ, ಒಳಿತನ್ನು ಸ್ವಿÃಕರಿಸುವ ಎದೆಗಾರಿಕೆ ಅನ್ಯರಿಗೆ ಬರಲು ಸಾಧ್ಯವಿಲ್ಲ. ಹಾಗಾದಾಗ ಮಾತ್ರ `ಇವ ನಮ್ಮವ, ಇವ ನಮ್ಮವ’ ಎಂದು ಅಪ್ಪಿಕೊಳ್ಳಲು ಸಾಧ್ಯ. ಅಂತರಂಗದಲ್ಲಿ ಕಲ್ಯಾಣವನ್ನು ಕಂಡರೆ ಬಹಿರಂಗ ತನ್ನಿಂದ ತಾನೇ ಕಲ್ಯಾಣವಾಗುವುದು. ಹೆಚ್ಚು ಹೆಚ್ಚು ಚರ್ಚು, ಮಸೀದಿ, ಮಂದಿರಗಳನ್ನು ಕಟ್ಟಿದರೆ ಶಾಂತಿ, ನೆಲೆಸಲು ಸಾಧ್ಯವಲ್ಲ; ಮನುಷ್ಯರ ಮನಸ್ಸುಗಳ ಕಟ್ಟಬೇಕು. ಶರಣರು ಕಟ್ಟಿದ್ದೂ ಮನಸ್ಸುಗಳನ್ನೆÃ. ಆಗ ನಮ್ಮ ಕಲ್ಯಾಣದ ಜೊತೆಗೆ ಲೋಕದ ಕಲ್ಯಾಣವೂ ಆಗುವುದು. ಎಲ್ಲರೂ ಸೇರಿ ಇಂಥ ಕಟ್ಟುವ ಕಾರ್ಯ ಮಾಡಬೇಕೇ ಹೊರತು ಒಬ್ಬಿಬ್ಬರಿಂದ ಇದು ಸಾಧ್ಯವಿಲ್ಲ ಎಂದರು.
ಶ್ರಿà ಮಲ್ಲಿಕಾರ್ಜುನ ಶ್ರಿÃಗಳು ಮಾತನಾಡಿ ಮನುಷ್ಯನ ಮನಸ್ಸು ಬಹಳ ಚಂಚಲ. ಶರೀರ ಎನ್ನುವ ಕಿಮ್ಮತ್ತಿನ ಕುದುರೆಯನ್ನು ಪರಾಮಾತ್ಮ ನಮಗೆ ನೀಡಿದ್ದಾನೆ. ಮಾನವ ಕುದುರಿಯ ಕಿಮ್ಮತ್ತು ಇನ್ನಷ್ಟು ಹೆಚ್ಚಬೇಕು ಎನ್ನುವ ಉದ್ದೆÃಶದಿಂದಲೇ ಪಂಡಿತಾರಾಧ್ಯ ಶ್ರಿÃಗಳು ಮತ್ತೆ ಕಲ್ಯಾಣದ ಮೂಲಕ ಜನರ ಬಳಿ ಬಂದಿದ್ದಾರೆ. `ಮತ್ತೆ ಕಲ್ಯಾಣ’ ಎನ್ನುವ ಶಬ್ದವೇ ಮೋಡಿ ಮಾಡುವುದು. ಶರಣ ಚಳುವಳಿಯ ಗತ ವೈಭವದ ಪರಿಚಯದ ಜೊತೆಗೆ ಅದು ಇಂದು ಎಷ್ಟು ಅಗತ್ಯವಾಗಿದೆ ಎಂಬುದನ್ನು ಸಿಂಹಾವಲೋಕನ ಮಾಡಿಕೊಳ್ಳಬೇಕಿದೆ. ಅಲ್ಲಮಪ್ರಭುಗಳು `ಕಲಿಯುಗದ ಜನರಿಗೆ ವಂದಿಸಿ ಬುದ್ಧಿ ಕಲಿಸಿದರೆ ಆಗಲಿ ಮಹಾಪ್ರಸಾದವೆಂದೆನಯ್ಯಾ’ ಎನ್ನುವರು. ಅಂದರೆ ಜನ ಮೊದಲು ಸಂಗೀತ, ಸಾಹಿತ್ಯ, ನಾಟಕ, ವಿಚಾರಗಳ ಚಿಂತನ-ಮಂಥನ ನಡೆಯುತ್ತಿದ್ದ ಜಾಗಕ್ಕೆ ತಾವೇ ಬರುತ್ತಿದ್ದರು. ಆದರೆ ಈ ಕಲಿಯುಗದಲ್ಲಿ ಜನರಿದ್ದಲ್ಲಿಗೆ ಇವನ್ನೆಲ್ಲ ತೆಗೆದುಕೊಂಡು ಹೋಗುವ ಸಂಕಲ್ಪ ಪಂಡಿತಾರಾಧ್ಯ ಶ್ರಿÃಗಳದ್ದು. ಮನೆಯಲ್ಲಿ ದಿನವೂ ಮತ್ತೆ ಮತ್ತೆ ಕಸ ಹೊಡೆಯುವಂತೆ ಸಮಾಜದ ಕಲುಷಿತ ವಾತಾವರಣವನ್ನು ಶುದ್ಧಿÃಕರಣ ಮಾಡುವ ಪ್ರಯತ್ನ ಮತ್ತೆ ಕಲ್ಯಾಣ. ಸ್ವಾಮಿಜಿಗಳು ಮಠದಲ್ಲಿ ಕುಳಿತರೆ ಶುದ್ಧಿÃಕರಣವಾಗದು ಎಂದು ಶ್ರಿÃಗಳು ತಿಂಗಳುಗಟ್ಟಲೆ ಮಠವನ್ನು ತೊರೆದು ಸಂಗೀತ, ಸಾಹಿತ್ಯ, ಕಲಾವಿದ, ತಂತ್ರಜ್ಞ,ರ ಪರಿವಾರವನ್ನು ಕಟ್ಟಿಕೊಂಡು ದಿನವೂ ನೂರಾರು ಕಿ ಮೀ ಸುತ್ತುತ್ತಿರುವುದು ಅತ್ಯಂತ ಕಷ್ಟಕರ ಕೆಲಸ. ಇಂಥ ಕಷ್ಟಕರ ಕೆಲಸಗಳಿಗೆ ಸ್ಪಂಧಿಸುವವರು ಕಡಿಮೆ. ಮೌಢ್ಯಗಳಿಗೆ ಸ್ಪಂಧಿಸುವವರು ಹೆಚ್ಚು. ಆದರೂ ಶ್ರಿÃಗಳು ದಿಟ್ಟ ಹೆಜ್ಜೆ ಇಟ್ಟು ಮುನ್ನಡೆದಿದ್ದಾರೆ. ಕಾಯಕ, ದಾಸೋಹ, ಸಮಾನತೆಗಳಂತಹ ನೂರಾರು ಸಿದ್ದಾಂತಗಳ ತಳಹದಿಯ ಮೇಲೆ ಶರಣರು ಕ್ರಾಂತಿ ನಡೆಸಿದರು. ಸ್ವರ್ಗ-ನರಕಗಳು ಬೇರೆ ಎಲ್ಲಿಯೂ ಇಲ್ಲ ನಮ್ಮ ಸುತ್ತಮುತ್ತಲೇ ಇವೆ ಎಂದರು. ಅಂದಿನ ಸ್ತಿçà ಸಮಾನತೆ ಇಂದಿಲ್ಲ. ಕಲ್ಯಾಣದ ಗತ ವೈಭವದ ನೆನಪನ್ನು ಸಮಾಜಕ್ಕೆ ಮಠಾಧೀಶರಿಗೆ ಮಾಡಿಕೊಡುವುದು ಇಂದಿನ ಅಗತ್ಯವಾಗಿದೆ ಎಂದರು.
ರೆವರೆಂಡ್ ಎಸ್ ಎಸ್ ಸಕ್ಕರಿ ಮಾತನಾಡಿ ಸಮಯ ಪ್ರಜ್ಞೆಗೆ ಮತ್ತೊಂದು ಹೆಸರೇ `ಮತ್ತೆ ಕಲ್ಯಾಣ’ದ ಕಾರ್ಯಕ್ರಮಗಳು. ಬಸವಣ್ಣನವರನ್ನು `ಜಗಜ್ಯೊÃತಿ’ ಎನ್ನುವಂತೆ ಏಸುಸ್ವಾಮಿಯವರನ್ನು `ಲೋಕದ ಬೆಳಕು’ ಎಂದು ಜನ ಕರೆಯುತ್ತಾರೆ. ಇವರೀರ್ವರ ಸಂದೇಶಗಳು ಜಗತ್ತಿಗೆ ಬೆಳಕು ನೀಡುತ್ತಿವೆ. ವಚನಗಳು ಭಾವ, ಭಕ್ತಿ, ಕಾಯಕ-ದಾಸೋಹಕ್ಕೆ ಕೊಟ್ಟ ವಚನಾಮೃತಗಳು. ದೇಹವೇ ದೇವಾಲಯ ಎನ್ನುವುದಾಗಿ ವಚನಕಾರರು ಹೇಳಿರುವ ಮಾತನ್ನೆÃ ಬೈಬಲ್‌ನಲ್ಲಿಯೂ ಕೂಡ ದೇಹದಲ್ಲಿ ದೇವಾತ್ಮನು ವಾಸಿಸುತ್ತಾನೆ ಎಂದಿದೆ. ಈ ಹಿನ್ನೆಲೆಯಲ್ಲಿ ಒಬ್ಬರನ್ನೊಬ್ಬರು ಗೌರವಿಸಬೇಕು. ಕಣ ್ಣಗೆ ಕಣ್ಣು, ಕಾಲಿಗೆ ಕಾಲು, ಪ್ರಾಣಕ್ಕೆ ಪ್ರಾಣ ಎನ್ನುವ ಶಿಕ್ಷೆಗಳು ಜಾರಿಯಿದ್ದ ಕಾಲದಲ್ಲಿ ಕ್ಷಮಿಸುವ ಔದಾರ್ಯವನ್ನು ತೋರಿದವರು ಬಸವಣ್ಣನವರು. ಹೊರಗಿನಿಂದ ಬರುವವು ಮನುಷ್ಯರನ್ನು ಕೆಟ್ಟವನನ್ನಾಗಿ ಮಾಡುವುದಿಲ್ಲ; ಒಳಗಿನಿಂದ ಬರುವ ಕಾಮ, ಕ್ರೊÃಧ, ದ್ವೆÃಷ, ಅಹಂಕಾರ ಮುಂತಾದವುಗಳು ಕೆಟ್ಟವನನ್ನಾಗಿಸುತ್ತವೆ. ಇದಕ್ಕಾಗಿಯೇ ಬಸವಣ್ಣನವರು ಅಂತರಂಗ ಶುದ್ದಿಗೆ ಹೆಚ್ಚು ಮಹತ್ವ ಕೊಟ್ಟರು. ಜಾತಿ, ಧರ್ಮದ ಹೆಸರಿನಲ್ಲಿ ದ್ವೆÃಷಗಳು ವಿಜೃಂಭಿಸುತ್ತಿರುವ ಸಂದರ್ಭದಲ್ಲಿ ಬಸವಣ್ಣನ `ದಯವಿಲ್ಲದ ಧರ್ಮಯಾವುದಯ್ಯಾ’ ಎನ್ನುವ ಮಾತನ್ನು ಎಲ್ಲರೂ ನೆನಪಿಸಿಕೊಳ್ಳಬೇಕು ಎಂದರು.
ಎಸ್ ಎಸ್ ಪೀರಝಾದೆ ಮಾತನಾಡಿ ಇಂದು ಮೊಳಕ್ಕೆ ಒಂದು, ಮಾರಿಗೆ ಒಂದು ಮಂದಿರ, ಮಸೀದಿ ಕಟ್ಟಿದ್ದೆÃವೆಯಾದರೂ ಶಾಂತಿ ಸಿಗುತ್ತಿಲ್ಲ. ಮತ್ತೆ ಕಲ್ಯಾಣ ಕೇವಲ ವೇದಿಕೆಯಲ್ಲಿ, ಧರ್ಮದ ಮುಖಂಡರಲ್ಲಿ ಆಗದೆ ನಿತ್ಯ ಜೀವನದಲ್ಲಿ, ಸಾಮಾನ್ಯರಲ್ಲೂ ಆಗಬೇಕು. ಜಾತಿಗಳು ಸಮಾಜವನ್ನು ತುಂಡು ತುಂಡು ಮಾಡುತ್ತವೆ. ಧರ್ಮ ಸೂಜಿಯಂತೆ ತುಂಡುಗಳು ಕೂಡಿಸಿ ಹೊಲೆಯುತ್ತದೆ. ಸತ್ಯವೇ ಧರ್ಮ, ಮಿಥ್ಯವೇ ಅಧರ್ಮ. ನಮ್ಮ ನೆರೆಹೊರೆಯವರೇ ನಮ್ಮ ನೋವಿಗೆ ಆಗುವರೇ ಹೊರತು ದೂರದ ನಮ್ಮ ಬಂಧುಗಳಲ್ಲ. ನೋವಿಗೆ ಮರುಗುವುದೇ ಮಾನವ ಧರ್ಮ. ಧರ್ಮಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಕೋಮುಗಲಭೆಗಳು ಆಗಲು ಸಾಧ್ಯವಿಲ್ಲ. ಪ್ರಾಣ ಉಳಿಸುವುದು ಆಯಾ ಗುಂಪಿನ ರಕ್ತವೇ ಹೊರತು; ಜಾತಿಯ ಬಂಧುಗಳಲ್ಲ. ಪ್ರಕೃತಿ ಜಾತಿಯನ್ನು ಸೃಷ್ಟಿಸಿಲ್ಲ; ಮಾನವ ಸೃಷ್ಟಿ. ಧರ್ಮವನ್ನು ನಾವು ಪಾಲಿಸಿದರೆ ನಮ್ಮನ್ನು ಧರ್ಮ ಪಾಲಿಸತ್ತದೆ. ನಾನು ಬಸವಣ್ಣನವರ ತತ್ವಗಳನ್ನು ಪಾಲಿಸುತ್ತೆÃನೆ. ಬಸವಣ್ಣ ಒಂದು ಸಮಾಜದ ಗುರುಗಳಲ್ಲ; ಮಾನವ ಕುಲಕ್ಕೆ ಗುರುಗಳು. ಏಸು, ಪೈಂಗಬರ್, ಬಸವಣ್ಣ ಎಲ್ಲರೂ ಗುರುಗಳೇ. ಎಲ್ಲ ನದಿಗಳೂ ಕೊನೆಗೆ ಸಮುದ್ರವನ್ನೆÃ ಸೇರಿವಂತೆ ಎಲ್ಲ ಧರ್ಮಗಳೂ ಕೂಡುವುದು ಕೊನೆಗೆ ಭಗವಂತನನ್ನೆÃ. ಧರ್ಮಾಭಿಮಾನದ ಜೊತೆಗೆ ರಾಷ್ಟಾçಭಿಮಾನವೂ ಬೇಕು ಎಂದರು.
`ಶೂನ್ಯ ಸಂಪಾದನೆಗಳು’ ಕುರಿತು ಸಿ ಎಂ ಕುಂದಗೋಳ ಮಾತನಾಡಿ 12 ನೆಯ ಶತಮಾನದ ವಚನಗಳು ಮತ್ತೆ ಪುನರ್ಜಿವ£ ಹೊಂದಿದ್ದು 15 ನೆಯ ಶತಮಾನದಿಂದ ಇಂದಿನವರೆಗೆ. ಶಿವನ ಪ್ರಸಾದಿ ಮಹದೇವಯ್ಯನವರು ಸಂಪಾದಿಸಿದ ಗ್ರಂಥವೇ ಶೂನ್ಯ ಸಂಪಾದನೆ. ನಂತರ ಇದೇ ಗ್ರಂಥ ಮೂರು ಬಾರಿ ಪರಿಷ್ಕಾರಗೊಂಡಿದೆ. ಶಿವನಪ್ರಸಾದಿ ಮಹದೇವಯ್ಯ ಮೊದಲ ಸಂಪಾದಕ. ಶೂನ್ಯ ಎಂದರೆ ಎಲ್ಲವನ್ನು ಒಳಗೊಂಡಿರುವುದು ಎಂದರ್ಥ. ಸಂಪಾದನೆ ಆ ತತ್ವ ಕಡೆ ತುಡಿಯುವ ಸಮರಸದ ಆನಂದ. ಗ್ರಂಥದಲ್ಲಿ ಸಂವಾದದ ಮೂಲಕ ವಚನಗಳನ್ನು ಬಳಸಿಕೊಳ್ಳುತ್ತ ಯಕ್ಷಗಾನ ಪ್ರಸಂಗದಂತೆ ಕಟ್ಟಲಾಗಿದೆ. ವಚನಗಳಂತಹ ಮಾದರಿ ಸಾಹಿತ್ಯ ಜಗತ್ತಿನಲ್ಲಿ ಎಲ್ಲಿಯೂ ಇಲ್ಲ. ಇಲ್ಲಿ ಅಲ್ಲಮರೇ ಕಥಾನಾಯಕ. ಅನುಭವ ಮಂಟಪದಲ್ಲಿ ನಡೆದಿರಬಹುದಾದ ಚರ್ಚೆಯನ್ನು ಸಂವಾದದ ರೂಪದಲ್ಲಿ ರಚಿಸಲಾಗಿದೆ. ಇದೇ ಕೃತಿ ಮತ್ತೆ 200 ವರ್ಷಗಳ ನಂತರ ಪರಿಷ್ಕರಣೆ ಹೊಂದುತ್ತದೆ. ಹೀಗೆ ಪರಿಷ್ಕಾರ ಹೊಂದಿದಾಗ ಸಿದ್ಧರಾಮೇಶ್ವರರ ಲಿಂಗದಿಕ್ಷೆಯ, `ಅನುಭವ ಮಂಟಪ’ ಎನ್ನುವ ಶಬ್ದವನ್ನು ಉಲ್ಲೆÃಖಿಸಲಾಗಿದೆ. ಮೂರನೆಯ ಬಾರಿ ಪರಿಷ್ಕರಿಸಿದವರು ಸಿದ್ದಲಿಂಗಯತಿಗಳು. ಇವರೂ ವಚನಗಳನ್ನು ಬರೆದಿದ್ದಾರೆ. ಇವರ ಪರಿಷ್ಕಾರದಲ್ಲಿ ಆಯ್ದಕ್ಕಿ ಮಾರಯ್ಯ ಮತ್ತು ಗೋರಕ್ಷÀನ ವಿಚಾರಗಳನ್ನು ಸೇರಿಸುತ್ತಾರೆ. ನಾಲ್ಕನೆಯ ಪರಿಷ್ಕರಣೆ ಗೂಳೂರು ಸಿದ್ಧವೀರರಿಂದ ಆಗುತ್ತದೆ. ಅವರು 21 ವಿಷಯಗಳನ್ನಾಗಿ ವಿಂಗಡಿಸುತ್ತಾರೆ. ನೀಲಲೋಚನೆಯ, ಮೋಳಿಗೆ ಮಾರಯ್ಯನ, ಗಟ್ಟಿವಾಳಯ್ಯನ, ಗೊಗ್ಗಯ್ಯನ ಪ್ರಸಂಗಗಳನ್ನು ಸೇರಿಸುತ್ತಾರೆ. ಗೂಳೂರು ಸಿದ್ಧವೀರಣ್ಣನವರ ಸಂಪಾದನೆ ಪ್ರಸಿದ್ಧಿ ಪಡೆದಿದೆ. ಮುಂದೆ ಅದು ಅನೇಕ ಮರುಮುದ್ರಣಗಳನ್ನು ಕಂಡಿದೆ. ಶೂನ್ಯ ಸಂಪಾದನೆಯ ಮೇಲೆ ಸಾಕಷ್ಟು ವಿಮರ್ಶೆ, ಪರಾಮರ್ಶೆಗಳು ನಡೆದಿವೆ, ನಡೆಯುತ್ತಲಿವೆ. ವಿಶ್ವವಿದ್ಯಾಲಯಗಳಲ್ಲಿ ಪಠ್ಯಪುಸ್ತಕವಾಗಿ ಬಳಕೆಯಲ್ಲಿದೆ. ಇಂಗ್ಲಿÃಷಿಗೂ ಅನುವಾದ ಮಾಡಲಾಗಿದೆ. ಈ ಸಂಪಾದನೆಯ ವಿಶೇಷವೆಂದರೆ ಅಲ್ಲಮ, ಬಸವಣ್ಣನಂಥ ಎತ್ತರದ ಅನುಭಾವಿಕ ವ್ಯಕ್ತಿಗಳ ಜೊತೆಗೆ ಕಾಳವ್ವೆ, ಸತ್ಯಕ್ಕನಂಥ ಸಾಮಾನ್ಯರನ್ನೂ ಸಮೀಕರಿಸಿರುವುದು. ವಿಸ್ಮಯಗೊಳಿಸು ದೃಶ್ಯಗಳನ್ನು ಸಂಪಾದನಾಕಾರರು ಕಟ್ಟಿಕೊಟ್ಟಿದ್ದಾರೆ. ಇಲ್ಲಿ ಮಹಿಳಾ ಪಾತ್ರಗಳಿಗೆ ಹೆಚ್ಚಿನ ಪ್ರಾತಿನಿಧ್ಯ ದೊರೆತಿದೆ. ಇದು ಮೂಲತಃ ತಾತ್ವಿಕ ಗ್ರಂಥವಾದರೂ ಜ್ವಲಂತ ಸಮಸ್ಯೆಗಳ ಪ್ರಾತಿನಿಧಿಕ ಗ್ರಂಥವಾಗಿದೆ ಎಂದರು.
`ಹಸಿವು-ಆಹಾರ’ ಕುರಿತಂತೆ ಡಾ. ಶಿವಗಂಗಾ ರುಮ್ಮಾ ಮಾತನಾಡಿ `ದೇಹಾರಕ್ಕೆ ಆಹಾರವೇ ನಿಚ್ಛಣ ಕೆ’, `ಹಸಿವೆಂಬ ಹೆಬ್ಬಾವು’ `ಹಸಿದವನಿಗನ್ನವನಿಕ್ಕಿ ವಿಷವನಿಳಹ ಬಲ್ಲಡೆ ಆತನೇ ಗಾರುಡಿಗ’, `ಬಡವರ ಭೋಜನವ ಭೋಜಿಸಿದವ ಭವಾನಿ ಪುತ್ರ ನೋಡಯ್ಯ’, `ಒಡಲುಗೊಂಡವ ಹುಸಿವ’ ಎನ್ನುವ ವಚನಕಾರರು ವಚನದ ಸಾಲುಗಳು ಹಸಿವನ್ನು ಕುರಿತು ಹೇಳುತ್ತವೆ. ಹಸಿವು ಕೇವಲ ವ್ಯಕ್ತಿಯೊಬ್ಬನ ಹಸಿವಲ್ಲ; ಸಮಾಜ ನಿರ್ಮಿತ ವ್ಯವಸ್ಥೆ. ಶರಣರ ಕಾಯಕ-ದಾಸೋಹ-ಮಹಾಮನೆ ತತ್ವಗಳಲ್ಲಿ ಒಂದಕ್ಕೊಂದು ಅಂತರ್ ಸಂಬಂಧಗಳಿವೆ. ಹಸಿವಿಗೆ ಮೂರು ಕಾರಣಗಳು ಎಂದು ಸ್ವಾಮಿನಾಥನ್ ಹೇಳಿದ್ದಾರೆ. ಅವು ಆಹಾರದ ಲಭ್ಯತೆ, ಕೊಳ್ಳುವ ಸಾಮರ್ಥ್ಯ ಮತ್ತು ಸಂಗ್ರಹಿಸುವ ಸಾಮರ್ಥ್ಯ. ಆಧುನಿಕ, ಪ್ರಜಾಪ್ರಭುತ್ವದ ಇಂದಿನ ಸಮಾಜ ಇನ್ನೂ ಹಸಿವಿನಿಂದ ಮುಕ್ತವಾಗಿಲ್ಲ. ನಮ್ಮ ದೇಶದಲ್ಲಿ ದಿನದಿಂದ ದಿನಕ್ಕೆ ಹಸಿವಿನಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಸರಕಾರಗಳ ಅಂಕಿ-ಅಂಶಗಳಿಗೂ ವಾಸ್ತವಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ವ್ಯಕ್ತಿಯ ಆಹಾರ ಭದ್ರತೆಯನ್ನು ಒದಗಿಸಿಕೊಡುವಲ್ಲಿ ವಿಫಲರಾಗುತ್ತಿದ್ದೆÃವೆ. ಕರ್ನಾಟಕದಲ್ಲಿಯೂ ಹಸಿವಿನಿಂದ ಸಾಯುತ್ತಿರುವ ವರದಿಗಳು ಬರುತ್ತಲೇ ಇವೆ. ನೌಕರಿ ಇರಲಾರದವರು ಮತ್ತು ಆ ವ್ಯಕ್ತಿಯ ಮೇಲೆ ಅವಲಂಬಿತವಾಗಿರುವ ವ್ಯಕ್ತಿಗಳು ಹಸಿವಿನಿಂದ ಬಳಲುತ್ತಿದ್ದಾರೆ. ಇಂದು ಎಲ್ಲ ಕ್ಷೆÃತ್ರಗಳು ತಮ್ಮ ನೌಕರರ ಸಂಖ್ಯೆಯನ್ನು ಕಡಿಮೆ ಮಾಡುತ್ತಿವೆ. ಲಕ್ಷಾಂತರ ಉದ್ಯೊÃಗಿಗಳು ಕೆಲಸ ಕಳೆದುಕೊಳ್ಳುತ್ತಿರುವುದು ಮುಂದಿನ ಭವಿಷ್ಯದಲ್ಲಿ ಹಿಂಸೆಯನ್ನು ಪ್ರಚೋದಿಸಬಲ್ಲದು. ಕಾಯಕ-ದಾಸೋಗಳಿಗೆ ಒಂದಕ್ಕೊಂದು ಸಂಬಂಧವಿದೆ. ಹಸಿವಿನ ಮುಂದೆ ಆಧ್ಯಾತ್ಮ ಕೆಲಸಕ್ಕೆ ಬರುವುದಿಲ್ಲ. ಲೋಕಕಲ್ಯಾಣಕ್ಕೂ ಮೊದಲು ಹಸಿವನ್ನು ಹಿಂಗಿಸುವುದೇ ಮತ್ತೆ ಕಲ್ಯಾಣವಾಗಬೇಕು. ಶೇ 10 ರಷ್ಟು ಜನ ಆಹಾರ ಅರಗಿಸಿಕೊಳ್ಳಲು ಔಷಧಿ ತೆಗೆದುಕೊಳ್ಳುತ್ತಿದ್ದರೆ; 90 ರಷ್ಟು ಜನ ಹಸಿವಿನಿಂದ ನರಳುತ್ತಿದ್ದಾರೆ. ಈ ವ್ಯತ್ಯಾಸ ಒಂದಲ್ಲ ಒಂದು ದಿನ ಸಮಾಜಕ್ಕೆ ಮಾರಕ. ಹಸಿವೊಂದನ್ನೆÃ ನಿವಾರಿಸಲು ಸಾಧ್ಯವಿಲ್ಲ. ಯುವಕರ ಕೈಗೆ ಕೆಲಸ ಕೊಡುವ ಬಗ್ಗೆ ಎಲ್ಲರೂ ಗಂಭೀರವಾಗಿ ಯೋಚಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಿದ್ಧನಗೌಡ ಪಾಟೀಲರು ಮಾತನಾಡಿ ಹಸಿವಿಗೆ ಎರಡು ಮುಖಗಳು; ಊಟ ಮಾಡಿಲ್ಲ, ಊಟ ಸಿಕ್ಕಿಲ್ಲ. ಊಟ ಸಿಕ್ಕಿಲ್ಲ ಎನ್ನುವವರಿಗೆ ಊಟದ ಭರವಸೆಯಿಲ್ಲ. ಮಾಡಿಲ್ಲ ಎನ್ನುವುದಕ್ಕೆ ವೈಯುಕ್ತಿಕ ಕಾರಣಗಳಿವೆ. ಸಿಕ್ಕಿಲ್ಲ ಎನ್ನುವವರ ಕಡೆ ಗಮನಹರಿಸಬೇಕು. ಇಂದು ನಾವು ಯಾವ ಧರ್ಮ, ಜಾತಿ, ಮನುಷ್ಯ ಸಂಘರ್ಷದಲ್ಲಿ ಬದುಕಿದ್ದೆÃವಲ್ಲ ಅದೇ ಸಂಘರ್ಷ 12 ನೆಯ ಶತಮಾನದಲ್ಲೂ ಇತ್ತು ಸ್ವತಃ ಬಿಜ್ಜಳನೂ ಸಂಘರ್ಷವನ್ನು ಅನುಭವಿಸಿದ್ದಾರೆ. ಅಂದಿನ ಆಳುವ ವರ್ಗ ತಿಪ್ಪೆಯ ಮೇಲೂ ಟ್ಯಾಕ್ಸ್ ಹಾಕಿದೆ. ಯುದ್ಧಗಳು ನಡೆಯುವುದೇ ಸಾಮ್ರಾಜ್ಯ ವಿಸ್ತರಣೆಗೆ. ಇಂದು ದೇವರು, ಧರ್ಮಗಳ ಹೆಸರಿನಲ್ಲಿ ಮಠಮಂದಿರಗಳು ಆಕ್ರಮ ಸಂಪತ್ತಿನ ಖಜಾನೆಗಳಾಗಿವೆ. ಪುರೋಹಿತಷಾಹಿ ವರ್ಗ ಮನುಷ್ಯನ ಭಾವನೆಗಳನ್ನು ದುರುಪಯೋಗಪಡಿಸಿಕೊಳ್ಳುವ ಸಂದರ್ಭದಲ್ಲಿ ವಚನಕಾರರು ಅವರ ವಿರುದ್ಧ ಮಾತನಾಡಿದರು. ಅದೇ ಕೆಲಸವನ್ನು ಇಂದೂ ಮಾಡಬೇಕಾಗಿದೆ. ತಂದೆ-ತಾಯಿಗಳೇ ಹೆತ್ತ ಕೂಸನ್ನು ಮರ್ಯಾದೆ ಹತ್ಯೆಗೈಯುತ್ತಿರುವುದು ಹೃದಯಹೀನ ಕೆಲಸ. ಕೆಲವಾದರೂ ಮಠಗಳು ಬೀದಿಗೆ ಇಳಿದು ನ್ಯಾಯದ ಪರವಾಗಿ ದ್ವನಿಯತ್ತೆರುವುದು ಇದಕ್ಕೆ ಕಾರಣ ಶರಣ ಪರಂಪರೆ, ಬಸವ ಪರಂಪರೆ. ವೇದ ಅಸಮಾನತೆಗಳನ್ನು ವೈಭವೀಕರಿಸುವಾಗ ಬಸವಣ ವೇದಗಳ ಮೂಗ ಕೊಯುವ ಕೆಲಸವನ್ನು ಮಾದರಾ ಚೆನ್ನಯನ ಮನೆಯ ಮಗನಾಗಿ ಮಾಡುತ್ತೆÃನೆ ಎನ್ನುವ ದಿಟ್ಟತನ ತೋರಿದರು. ಮಾನವೀಯ ಸಿದ್ದಾಂತಗಳನ್ನು ಒಳಗೊಂಡವರು ಭಕ್ತರು ಉಳಿದವರು ಭವಿಗಳು. ಪ್ರಭತ್ವವನ್ನು ಎದರಿಸಿ ಗೆದ್ದದ್ದು ಶರಣಧರ್ಮ. ಶರಣ ಧರ್ಮ ತೋರಿಸಿದಷ್ಟು ಸ್ಪಷ್ಟ ನಿಲುವುಗಳನ್ನು ಜಗತ್ತಿನ ಯಾವ ಧರ್ಮವೂ ಪರ್ಯಾಯ ರಾಜಕೀಯಕ್ಕೆ ಸಂಬಂಧಪಟ್ಟಂತೆ ನಿಲುವು ತಳೆದಿಲ್ಲ. ಕಾಯಕ-ದಾಸೋಹ ತತ್ವಗಳು ಅರ್ಥಶಾಸ್ತçದ ಪರಿಮಿತಿಯಲ್ಲಿಯೂ ಬರುತ್ತವೆ. ಕಾಯಕ ಪ್ರೊಡಕ್ಷನ್, ದಾಸೋಹ ಡಿಸ್ಟುçಬ್ಯುಷನ್. ಕಾಯಕ ಅರ್ಥಶಾಸ್ತç, ಶುದ್ಧ ಕಾಯಕ ಅನ್ನುವುದು ತತ್ವಶಾಸ್ತç. ಚಾಣ ಕ್ಯನ ಅರ್ಥಶಾಸ್ತçವಲ್ಲ; ಶರಣರ ಅರ್ಥಶಾಸ್ತçವೆಂದು ಕರೆಯಬೇಕು. ಸಂಪತ್ತಿನ ಕ್ರೊÃಢಿಕರಣವಾಗದಂತೆ ದಾಸೋಹ ವ್ಯವಸ್ಥೆಯ ಮೂಲಕ ಎಲ್ಲರಿಗೂ ಹಂಚಿದರು. ಆರ್ಥ ಮದ, ಅಧಿಕಾರ ಮದ, ಕುಲ ಮದಗಳು ಎಲ್ಲಕಾಲಕ್ಕೂ ವಿಜೃಂಭಿಸುತ್ತವೆ. ಇವುಗಳ ಬಗ್ಗೆ ಜನಜಾಗೃತಿ ಮೂಡಿಸುವ ಕೆಲಸವೇ ಮತ್ತೆಕಲ್ಯಾಣದ್ದು. ನನ್ನ ಧರ್ಮ ಮಾತ್ರ ಶ್ರೆÃಷ್ಠ ಎನ್ನುವ ಹಕ್ಕು ಯಾರಿಗೂ ಇಲ್ಲ. ಭವಿಷ್ಯಕ್ಕೆ ಇರುವುದೊಂದೇ ಮಾರ್ಗ ಅದು ವಚನಮಾರ್ಗ ಎಂದರು.
ಆರಂಭದಲ್ಲಿ ಶಿವಸಂಚಾರದ ಕಲಾವಿದರು ವಚನಗೀತೆಗಳನ್ನು ಹಾಡಿದರು. ಶಂಭು ಹೆಗಡಾಳ್ ಸ್ವಾಗತಿಸಿದರೆ, ಕೀರ್ತಿವತಿ ನಿರ್ವಹಿಸಿದರು. ಕರ‍್ಯಕ್ರಮದ ನಂತರ ಸಾಣೇಹಳ್ಳಿಯ ಶಿವಸಂಚಾರ ತಂಡದಿಂದ ‘ಮೋಳಿಗೆ ಮಾರಯ್ಯ’ ನಾಟಕ ಪ್ರದರ್ಶಗೊಂಡಿತು. ನಾಟಕ ಮುಗಿದ ಮೇಲೆ ಪ್ರೆÃಕ್ಷಕರು ನಾಟಕದ ಬಗೆಗಿನ ಅಭಿಪ್ರಾಯಗಳನ್ನು ಹಂಚಿಕೊಂಡರು. ನೆರೆ ಸಂತ್ರಸ್ತರ ನಿಧಿಗೆ ನಾಲ್ಕು ಸಾವಿರ ರೂಪಾಯಿಗಳು ಸಂಗ್ರಹವಾಯಿತು.
ಕಲಾಭವನದ ಆವರಣದಿಂದ ಸಾಮರಸ್ಯ ನಡಿಗೆ ಆರಂಭವಾಯಿತು. ಜನಪ್ರತಿನಿಧಿಗಳು, ವಿವಿಧ ಧಾರ್ಮಿಕ ಮುಖಂಡರು, ವಿದ್ಯಾರ್ಥಿಗಳು, ಕಲಾ ತಂಡಗಳು, ವಚನಕಾರರ ಸ್ಥಬ್ಧ ಚಿತ್ರಗಳನ್ನೊಳಗೊಂಡ ವಿಶೆÀÃಷ ವಾಹನಗಳೊಂದಿಗೆ ಪಾಪು ಸಭಾಭವನÀಕ್ಕೆ ಬಂದು ತಲುಪಿದರು.
ವಿದ್ಯಾರ್ಥಿಗಳೊಂದಿಗೆ ಸಂವಾದ
ಆಗಸ್ಟ್ 27, ಧಾರವಾಡ; ಇಲ್ಲಿನ ಸಿದ್ಧರಾಮೇಶ್ವರ ಬಿಇಡಿ ಕಾಲೇಜಿನ ಸಭಾಭವನದಲ್ಲಿ ‘ಮತ್ತೆ ಕಲ್ಯಾಣ’ ಕರ‍್ಯಕ್ರಮದ ನಿಮಿತ್ತ ಏರ್ಪಡಿಸಿದ್ದ ವಿದ್ಯಾರ್ಥಿಗಳೊಂದಿಗೆ ಸಂವಾದ ಕರ‍್ಯಕ್ರಮದಲ್ಲಿ ಶ್ರಿÃ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಪ್ರಶ್ನೆಗಳಿಗೆ ಉತ್ತರಿಸುತ್ತಾ ವಿದ್ಯಾರ್ಥಿಗಳೊಂದಿಗೆ ಸಂವಾದ ಮಾಡುತ್ತಿರುವುದು ತುಂಬ ಪರಿಣಾಮಕಾರಿಯಾಗಿದೆ. ವಿದ್ಯಾರ್ಥಿಗಳಲ್ಲಿ ಪ್ರಶ್ನೆಗಳನ್ನು ಕೇಳುವ ಸ್ಥೆöÊರ್ಯವನ್ನು, ಆಲೋಚನಾ ವಿಧಾನವನ್ನು ಉದ್ದಿÃಪನಗೊಳಿಸುತ್ತವೆ. ಮಕ್ಕಳ ಪ್ರಶ್ನೆಗಳು ಸ್ವಾಮಿಗಳನ್ನೂ ಒಳಗೊಂಡಂತೆ ಎಲ್ಲರಲ್ಲೂ ಜಾಗೃತಿಯನ್ನುಂಟು ಮಾಡುವಂಥವು. ವಿದ್ಯಾರ್ಥಿಗಳು ಹಾಗೂ ಗುರುಗಳು ಸರಿಯಾದ ದಾರಿಯಲ್ಲಿ ಸಾಗಿದರೆ ಆದರ್ಶ ಸಮಾಜದ ಕನಸು ನನಸಾಗುವುದು. ಮನುಷ್ಯನ ಜೀವನ ಪಶುಗಳಂತೆ ಉಂಡು, ಉಟ್ಟು, ಎಲ್ಲೊÃ ಮಲಗುವುದಲ್ಲ; ಅದಕ್ಕೊಂದು ಸಾಧನೆಯ ಹಾದಿಯಿದೆ. ಮನುಷ್ಯನಿಗೆ ಬೇಕಾಗಿರುವುದು ಕೇವಲ ಅಕ್ಷರದ ಅರಿವಲ್ಲ; ವಿವೇಕದ ಅರಿವು, ಕಾಯಕಶ್ರದ್ಧೆ, ಗೌರವಯುತ ಜೀವನ.
ಇಂದಿನ ಶಿಕ್ಷಣ ತಲೆಯೆತ್ತಿ ಬಾಳುವುದಕ್ಕೆ ಪ್ರೆÃರಣೆ ನೀಡುತ್ತಿದೆಯೇ ಎಂದು ಪ್ರಶ್ನೆ ಹಾಕಿದರೆ ಖಂಡಿತ `ಇಲ್ಲ’ ಎನ್ನುವ ಉತ್ತರವೇ ಬರುತ್ತೆ. ಗೃಹಕೈಗಾರಿಕೆಗಳು, ಕರಕುಶಲದಂಥ ಮೂಲಭೂತ ಉದ್ಯೊÃಗಗಳು ಕಣ್ಮರೆಯಾಗಿವೆ. ಶಿಕ್ಷಣ ಕೇವಲ ದೊಡ್ಡ ದೊಡ್ಡ ಉದ್ಯೊÃಗಗಳನ್ನು ಪಡೆಯುವುದಕ್ಕಾಗಿ ಮಾತ್ರ ಎನ್ನುವಂತಾಗಿದೆ. ನೈತಿಕ ಶಿಕ್ಷಣ ದೊರಕುತ್ತಿಲ್ಲ. ಮಡಿಕೆಯ ಮಾಡಲು ಮಣ್ಣು, ತೊಡುಗೆ ಮಾಡಲು ಹೊನ್ನು ಬೇಕಾಗಿರುವಂತೆ ಶಿವಪಥವನ್ನು ತೋರಿಸಬೇಕಾದರೆ ಗುರು ಪಥವೇ ಮೊದಲು. ದೇವರನ್ನು ಅರಿತುಕೊಳ್ಳಬೇಕಾದರೆ ಸಜ್ಜನರ ದಾರಿಯಲ್ಲಿ ನಡೆಯಬೇಕೆಂದು ಶರಣರು ಹೇಳಿದರು. `ಶರಣ’ ಎಂದರೆ ಹಣೆಯಲ್ಲಿ ವಿಭೂತಿ, ಕೊರಳಲ್ಲಿ ರುದಾಕ್ಷಿ ಹಾಕಿದವರಲ್ಲ; ಅರಿವು-ಆಚಾರ ಒಂದಾದವರು ಶರಣರು.
ನಮ್ಮ ಪ್ರತಿಯೊಂದು ಆಲೋಚನೆ, ದೃಷ್ಟಿಕೋನ ಸಕಾರಾತ್ಮಕವಾಗಿರಬೇಕು. ದೃಷ್ಟಿಯಂತೆ ಸೃಷ್ಟಿ. ಕೆಟ್ಟದ್ದರಲ್ಲಿಯೂ ಒಳ್ಳೆಯದನ್ನೆÃ ಗುರುತಿಸಬೇಕು. ಮಾಧ್ಯಮಗಳು ನಕಾರಾತ್ಮಕ ಸಂಗತಿಗಳನ್ನೆÃ ಪ್ರಸಾರ ಮಾಡುತ್ತಿರುವುದರಿಂದ ಮನುಷ್ಯನ ಮನಸ್ಸನ್ನು ವಿಕಾರಗೊಳ್ಳುವಂತಾಗಿದೆ. ಶರಣರು ಅಕ್ಷರ ಕಲಿತವರಲ್ಲ. ಕಾಯಕದ ಮೂಲಕ ಅನುಭವವನ್ನು ಪಡೆದುಕೊಂಡು ಅರಿವನ್ನು ಹೆಚ್ಚಿಸಿಕೊಂಡರು. ಕಾಯಕವೇ ಶಿಕ್ಷಣದ ಮಾಧ್ಯವೂ ಆಗಿತ್ತು. ಶರಣರು ಕೆಲಸದ ಬದಲಾಗಿ ಕಾಯಕ ಎನ್ನುವ ಶಬ್ಧವನ್ನು ಬಳಕೆಯಲ್ಲಿ ತಂದರು. ಕಾಯಕದಲ್ಲಿ ಮೇಲು-ಕೀಳು ಎನ್ನುವ ಭಾವನೆಯನ್ನು ತೊಡೆದು ಸಮಸಮಾಜದ ಕನಸು ಕಂಡರು. ನಾವು ಬೇರೆಯವರ ತಪ್ಪುಗಳನ್ನು ತಿದ್ದಬೇಕಾದರೆ ಮೊದಲು ನಮ್ಮಲ್ಲಿ ನೈತಿಕ ಶಕ್ತಿಂiÀiನ್ನು ಸಂಚಯಿಸಿಕೊಳ್ಳಬೇಕು. ನನ್ನಲ್ಲಿ ಬದಲಾವಣೆಯಾಗದೇ ಬೇರೆಯವರ ತಪ್ಪುಗಳನ್ನು ತಿದ್ದುವುದು ಫಲಪ್ರದವಾಗುವುದಿಲ್ಲ. ಹಿಂದೆ ಗುರುವಿಗೆ ತುಂಬಾ ಮಹತ್ವವಿತ್ತು. ಗುರು ಶಿಕ್ಷೆ ಕೊಟ್ಟರೂ ಯಾರು ಪ್ರಶ್ನಿಸುತ್ತಿರಲಿಲ್ಲ. ಇಂದು ಅಂತಹ ಗುರುಗಳನ್ನು ಕಾಣುತ್ತಿಲ್ಲ, ಶಿಷ್ಯನನ್ನೂ ಕಾಣುತ್ತಿಲ್ಲ.
ಶರಣರ ವಿಚಾರಗಳು ನಮ್ಮ ಬದುಕಿಗೆ ಶಕ್ತಿಯನ್ನು ತುಂಬುವವು. ಆದ್ದರಿಂದ ಶಾಲಾ ಪಠ್ಯದ ಜೊತೆ ನಿತ್ಯ ವಚನಗಳನ್ನು ಓದುವ, ಅರ್ಥಮಾಡಿಕೊಳ್ಳುವ, ಅನುಷ್ಠಾನಕ್ಕೆ ತರುವ ಪ್ರಯತ್ನ ಮಾಡಿದರೆ ವ್ಯಕ್ತಿತ್ವ ಅರಳುವುದು. ವಿದ್ಯಾರ್ಥಿಗಳು ಪ್ರಶ್ನೆಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳದೆ ಸಂಬಂಧಪಟ್ಟವರನ್ನು ಕೇಳಿದಾಗ ಪರಿಹಾರ ಸಿಗುವುದು. ಇವತ್ತಿನ ಸಂಸತ್ತಿಗೂ ಆಗಿನ ಅನುಭವ ಮಂಟಪಕ್ಕೂ ತುಂಬಾ ವ್ಯತ್ಯಾಸ ಇದೆ. ಇಂದಿನ ಸಂಸದರಿಗೆ ಅರಿವು-ಆಚಾರದ ಕೊರತೆಯಿದೆ. ಅವರು ಅರಿವು ಆಚಾರವನ್ನು ಮೈಗೂಡಿಸಿಕೊಂಡಿದ್ದರು. ಅನುಭವ ಮಂಟಪ ಕಟ್ಟಡವಲ್ಲ; ಮನಸ್ಸುಗಳನ್ನು ಕಟ್ಟುವ ಕ್ರಿಯೆ. ಸ್ಥಾವರಕ್ಕಳಿವುಂಟು; ಜಂಗಮಕ್ಕಳಿವಿಲ್ಲ ಎಂದ ಬಸವಣ್ಣನ ಮೂರ್ತಿಯನ್ನು ಪೂಜೆ ಮಾಡುತ್ತಿರುವುದು ವಿಷಾದದ ಸಂಗತಿ. ಮೂರ್ತಿಯನ್ನು ಸಾಂಕೇತಿಕವಾಗಿ ಇಟ್ಟುಕೊಳ್ಳಬೇಕೇ ಹೊರತು ಮೂರ್ತಿಪೂಜೆಯೇ ಅಂತಿಮ ಗುರಿಯಾಗಬಾರದು. ಪೂಜಿಸುವ ಬದಲು ಬಸವಣ್ಣನವರ ವಿಚಾರಗಳನ್ನು ಮೈಗೂಡಿಸಿಕೊಳ್ಳಬೇಕು. ಗುರುವಾಗಲು ಹೆಣ್ಣು ಗಂಡಿನ ಅಂತರವಿಲ್ಲ. ಯಾರು ಬೇಕಾದರೂ ಗುರುವಾಗಬಹುದು. ಬಸವಣ್ಣನವರಂಥ ಪ್ರಧಾನಿಯನ್ನು ತಯಾರು ಮಾಡುವುದು ನಮ್ಮ ಉದ್ದೆÃಶವೇ ಹೊರತು ನಾವೇ ಪ್ರಧಾನಿಯಾಗುವುದಲ್ಲ. ತತ್ವಜ್ಞಾನಿಗಳು ಸಮಾಜದಿಂದ ಹೊರತಾದವರಲ್ಲ. ಸಮಾಜದೊಳಗಿದ್ದು ಸಮಾಜದ ತತ್ವಗಳನ್ನು ತಿದ್ದಿಕೊಂಡು ತತ್ವಜ್ಞಾನಿಗಳಾದವರು. ಬಸವಣ್ಣನವರನ್ನು ಎಲ್ಲಾ ಶರಣರು ತನ್ನ ಗುರು ಎಂದು ಗೌರವಿಸುತ್ತಿದ್ದರು. ಶರಣರು ಗುಡಿಗುಂಡಾರಗಳನ್ನು ತಿರಸ್ಕಾರ ಮಾಡಿ ದೇವರು ಹಾಗೂ ಭಕ್ತರ ಮಧ್ಯೆ ಇರುವ ಮೀಡಿಯೇಟರ್‌ನಿಂದ ಹೊರಬಂದು ಅಂಗೈಯಲ್ಲಿ ಲಿಂಗವನ್ನು ಕರುಣ ಸಿದರು. ಹರಳಯ್ಯ ಮಾದಿಗ ಜಾತಿಯವನಲ್ಲ. ಮಧುವರಸ ಬ್ರಾಹ್ಮಣ ಜಾತಿಯವನಲ್ಲ. ಅವರಿಬ್ಬರೂ ಶರಣರ ಸಹವಾಸದಿಂದ ಅರಿವು-ಆಚಾರ-ಇಷ್ಟಲಿಂಗ ಪಡೆದುಕೊಂಡು ಲಿಂಗಾಯತರಾದರು. ಎಡಪಂಥ, ಬಲಪಂಥ, ಮಧ್ಯಪಂಥವೆನ್ನದೆ ನಾವೆಲ್ಲರೂ ಬಸವಪಂಥದವರೆಂದು ಹೆಮ್ಮೆಯಿಂದ ಹೇಳಿಕೊಳ್ಳಬೇಕು ಎಂದರು.
ಸಂವಾದಕ ಡಾ. ವೀರಣ್ಣ ರಾಜೂರು ಮಾತನಾಡಿ ಶರಣರು ಸಮಾಜದ ನೆಮ್ಮದಿಯ ಬದುಕಿಗೆ ಷಟ್‌ಸ್ಥಲವನ್ನು ಕೊಟ್ಟಿದಾರೆ. ಅಂಗದಿಂದ ಲಿಂಗವಾಗುವ ಹಂತಗಳೇ ಷಟ್‌ಸ್ಥಲಗಳು. ಸ್ವಸ್ಥöಸಮಾಜ ನಿರ್ಮಾಣ ಮಾಡುವಂತದ್ದೆÃ ಲಿಂಗಾಯತ ಧರ್ಮದ ಮುಖ್ಯ ಉದ್ದೆÃಶ. ಲಿಂಗಾಯತ ಧರ್ಮದಲ್ಲಿ ವೇದಸಂಸ್ಕೃತಿ ಇಲ್ಲ. ಬಸವಣ್ಣನವರು ಮೃದು ಸ್ವಭಾವದವರು. ಹೆಣ್ಣುಮಕ್ಕಳಿಗೆ ವಿಶೇಷ ಸ್ಥಾನಮಾನವನ್ನು ನೀಡಿದವರು. ಅಂಥವರ ಬಾಯಿಂದ `ಚಾಂಡಲಗಿತ್ತಿ’ ಎನ್ನುವ ಶಬ್ದ ಬರಲಿಕ್ಕಿಲ್ಲ. ಇದು ಪ್ರಕ್ಷÄಬ್ಧ ವಚನ. ಬಸವಣ್ಣನವರ ವಚನಗಳು ನೆಲಮೂಲದಿಂದ ಅರಳಿದಂಥವು. ಸಾಮಾನ್ಯರಿಗೂ ಅರ್ಥವಾಗುವಂತೆ ಇವೆ. ನಮ್ಮನ್ನು ನಾವು ಪೂಜೆ ಮಾಡಿಕೊಳ್ಳುವುದೇ ಇಷ್ಟಲಿಂಗ. ಅಂತಹ ಇಷ್ಟಲಿಂಗವನ್ನು ಶರಣರು ಕರುಣ ಸಿದರು. ಶರಣರ ಉದ್ದೆÃಶ ಜನಸಾಮಾನ್ಯರನ್ನು ಅಸಾಮಾನ್ಯರನ್ನಾಗಿಸುವುದಾಗಿತ್ತು. ವಚನ ಸಾಹಿತ್ಯ ಕನ್ನಡ ಸಾಹಿತ್ಯಕ್ಕೆ ವಿಶೇಷ ಕೊಡುಗೆಯನ್ನು ಕೊಟ್ಟಿದೆ.
ಸಂವಾದದಲ್ಲಿ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳು
ಶರಣರು ಮೂರ್ತಿ ಪೂಜೆಯನ್ನು ತಿರಸ್ಕಾರ ಮಾಡಿದರು. ಈಗ ಮೂರ್ತಿಪೂಜೆಯನ್ನು ವೈಭವೀಕರಿಸಿ ಪೂಜೆ ಮಾಡುತ್ತಾರಲ್ಲ. ಇದು ತಪ್ಪಲ್ಲವೇ?
ಷಟ್‌ಸ್ಥಲದ ವಚನಗಳೆಂದರೇನು? ಇದರಿಂದ ವಿದ್ಯಾರ್ಥಿಗಳಿಗೆ ಏನು ಉಪಯೋಗ?
ಅನುಭವ ಮಂಟಪ ಎಂದರೇನು?
ಆಧುನಿಕ ಕಾಲದಲ್ಲಿಯೂ ದೇವಾಲಯಗಳ ಮಹತ್ವ ಕಡಿಮೆಯಾಗಿಲ್ಲವೇಕೆ?
ಬಸವಣ್ಣನವರು ಮೂರ್ತಿಪೂಜೆಯನ್ನು ತಿರಸ್ಕಾರ ಮಾಡಿದರು. ಈಗ ಬಸವಣ್ಣನವರ ದೊಡ್ಡ ದೊಡ್ಡ ಮೂರ್ತಿಯನ್ನು ಮಾಡಿ ಪೂಜೆ ಮಾಡುವುದು ಎಷ್ಟರಮಟ್ಟಿಗೆ ಸರಿ?
ರುದ್ರಾಕ್ಷಿಯನ್ನು ಧರಿಸುವುದು ಶರಣರ ಸಂಸ್ಕೃತಿಯೋ ಅಥವಾ ವೈಜ್ಞಾನಿಕ ಕಾರಣವಿದೆಯೇ?
ಶರಣರು ಅನುಭವ ಮಂಟಪದಲ್ಲಿ ಸೇರಿಕೊಂಡು ಚರ್ಚೆ ಮಾಡುತ್ತಿದ್ದ ಉದ್ದೆÃಶವೇನು?
12 ನೆಯ ಶತಮಾನದಲ್ಲಿ ಬಸವಣ್ಣನವರು ಮಹಿಳೆಯರಿಗೆ ಸ್ತಿçà ಸಮಾನತೆ ನೀಡಿದ್ದರು. ಈಗ 21ನೆಯ ಶತಮಾನದಲ್ಲಿ ಸ್ತಿçÃಗೆ ಗುರುಸ್ಥಾನವನ್ನೆÃಕೆ ಕೊಟ್ಟಿಲ್ಲ?
ಸ್ವಾಮೀಜಿಯವರೇ ನೀವು ಪ್ರಧಾನಮಂತ್ರಿಯಾದರೆ ಏನು ಕೆಲಸ ಮಾಡುತ್ತಿÃರಿ?
ಬಸವಣ್ಣನವರ ಮನೆಗೆ ಕಳ್ಳರು ಬಂದಾಗ ತನ್ನ ಹೆಂಡತಿಗೆ ಕೊರಳಲ್ಲಿದ್ದ ತಾಳಿಯನ್ನು ಬಿಚ್ಚುಕೊಂಡು `ಚಾಂಡಾಲಗಿತ್ತಿ’ ಎಂದು ಯಾಕೆ ಹೇಳಿದರು?
ಬಸವಣ್ಣನವರು ಆತ್ಮವೇ ದೇವರು ಎಂದು ಕರೆದರು. ಆದರೆ ಕೂಡಲಸಂಗಮದೇವ ಎಂಬ ಆರಾಧ್ಯದೈವ ಬಸವಣ್ಣನವರಿಗೆ ಯಾಕೆ?
ಒಳ್ಳೆಯವರು ಒಳ್ಳೆಯವರ ಜೊತೆಯಿದ್ದರೆ ಒಳ್ಳೆಯವರಾಗುತ್ತಾರೆ. ಆದರೆ ಕೆಟ್ಟವರನ್ನು ಬದಲಾವಣೆ ಮಾಡುವವರು ಯಾರು?
ಒಬ್ಬರಿಗೊಬ್ಬರು ಒಪ್ಪಿಕೊಂಡು ಅಂತರ್‌ಜಾತಿ ವಿವಾಹ ನಡೆದರೆ ಮರ್ಯಾದೆ ಹತ್ಯೆ ನಡೆಯುತ್ತವೆ. ಇದಕ್ಕೆ ಕಾರಣವೇನು?
ಇಷ್ಟಲಿಂಗ ಪೂಜೆ ಮಾಡುವವರಿಗೂ ಹಾಗೂ ಗುಡಿಯಲ್ಲಿ ಪೂಜೆ ಮಾಡುವವರಿಗೂ ಏನಾದರೂ ವ್ಯತ್ಯಾಸವಿದೆಯೇ?
ಬಸವಣ್ಣನವರದು ಜನರಿಗೆ ಉತ್ತಮ ಬದುಕನ್ನು ಕಟ್ಟಿಕೊಡುವ ಉದ್ದೆÃಶವಿತ್ತೊÃ ಅಥವಾ ಲಿಂಗಾಯತ ಧರ್ಮ ಸ್ಥಾಪನೆ ಮಾಡುವುದಾಗಿತ್ತೊÃ?
ಚುಳುಕಾದಿರಯ್ಯಾ ಎಂದರೇನು?
ಲಿಂಗಾಯತ ಹೋರಾಟದಲ್ಲಿ ಪ್ರಮುಖ ಸ್ವಾಮಿಗಳು ಮುಂಚೂಣ ಯಲ್ಲಿದ್ದಾರೆ. ಆದರೆ ಅದೇ ಸ್ವಾಮಿಗಳು ಪಂಗಡಕ್ಕೊಂದು ಪೀಠವನ್ನು ಸ್ಥಾಪನೆ ಮಾಡಿದ್ದಾರೆ. ಇದು ಎಷ್ಟರಮಟ್ಟಗೆ ಸರಿ?
ಕೆಲವರು ಹಳಸಿದ ಅನ್ನಕ್ಕೆ ಉಪ್ಪಿನಕಾಯಿ ರೀತಿಯಲ್ಲಿ ವಚನಗಳನ್ನು ಉಪಯೋಗಿಸಿಕೊಳ್ಳುತ್ತಾರೆ. ಇದಕ್ಕೆ ತಮ್ಮ ಅಭಿಪ್ರಾಯವೇನು?
ತತ್ವಮುಖ್ಯವೋ, ಕಾಯಕ ಮುಖ್ಯವೋ?
ಹೊಲೆಯ ಪದದ ಅರ್ಥವೇನು?
ವಚನಗಳನ್ನು ಇಡೀ ಜಗತ್ತಿಗೆ ತಿಳಿಸುವುದು ಹೇಗೆ?
ಇಷ್ಟಲಿಂಗವನ್ನು ಹೇಗೆ ತಯಾರಿಸುತ್ತಾರೆ?
ಪ್ರಾಮಾಣ ಕವಾಗಿ ಮಾಡುವ ಕಾಯಕ ಎಲ್ಲವೂ ಶ್ರೆÃಷ್ಠವೆಂದು ಶರಣರು ಹೇಳಿದರು. ಪ್ರಸ್ತುತ ದಿನಮಾನಗಳಲ್ಲಿ ಈ ಪದ್ಧತಿಯನ್ನು ಸಮಾಜ ಒಪ್ಪುತ್ತಿಲ್ಲ ಯಾಕೆ?
ಬಸವಣ್ಣ ಪವಾಡಗಳನ್ನು ಅಲ್ಲಗಳೆದರು. ಆದರೆ ಅವರ ಪರಂಪರೆಯವರು ಪವಾಡಗಳನ್ನು ಮಾಡುತ್ತಿದ್ದಾರಲ್ಲ. ಇದು ಎಷ್ಟರಮಟ್ಟಿಗೆ ಸರಿ?
ಶರಣರ ಪ್ರಕಾರ ದೇವರು ಎಂದರೇನು? ದೇವರು ಸಾಕಾರನೋ? ನಿರಾಕಾರನೋ?
ಪ್ರಕೃತಿಯಲ್ಲಿ ದೇವರಿದ್ದಾನೆಯೇ?
ಓಂ ಪದದ ಅರ್ಥವೇನು?
21ನೆಯ ಶತಮಾನದಲ್ಲಿಯೂ ಸ್ತಿçà ಪುರುಷ ಎನ್ನುವ ಭಿನ್ನತೆ ಏಕಿದೆ?
- ಹೆಚ್ ಎಸ್ ದ್ಯಾಮೇಶ್
9449649850