ಏನಿದು ಕಲ್ಯಾಣ

ಲಿಂಗವ ಪೂಜಿಸಿ ಫಲವೇನಯ್ಯಾ, ಸಮರತಿ, ಸಮಕಳೆ, ಸಮಸುಖವನರಿಯದನ್ನಕ್ಕ, ಲಿಂಗವ ಪೂಜಿಸಿ ಫಲವೇನಯ್ಯಾ ಕೂಡಲಸಂಗಮ ದೇವರ ಪೂಜಿಸಿ ನದಿಯೊಳಗೆ ನದಿ ಬೆರೆಸಿದಂತಾಗದನ್ನಕ್ಕ ಮಾನವತೆಯನ್ನು ಪ್ರೀತಿಸುವ ಸರ್ವಧರ್ಮೀಯರೇ; ಎಲ್ಲ ಜಾತಿ, ಧರ್ಮಗಳ ಸ್ತ್ರೀ-ಪುರುಷರ ನಡುವೆ ಸಮಭಾವ ಮೂಡದೆ ಯಾವ ಪೂಜೆಯೂ ಫಲ ನೀಡದು. ಮನದೊಳಗೆ ಅರಿವಿನ ಜ್ಯೋತಿ ಬೆಳಗಿ ಅದು ಸಮಾಜದ ವಿಶಾಲ ಬೆಳಕಿನೊಳಗೆ ಲೀನವಾಗದಿದ್ದರೆ ಭಕ್ತಿಯ ಸಂಕೇತಗಳು ಅರ್ಥಹೀನ. ಜಡತ್ವಕ್ಕೆ ಸಂದ ಮನಸ್ಸುಗಳನ್ನು ಬಡಿದೆಚ್ಚರಿಸಿ ಬದುಕಿನ ಸಾರ್ಥಕತೆಯ ಮಾರ್ಗ ತೋರಿಸಿದ್ದು ೧೨ನೆಯ ಶತಮಾನದ ಶರಣ ಚಳವಳಿ. ಆ ಅರಿವಿನ ಮಾರ್ಗವನ್ನು ಮತ್ತೆ ಕಂಡುಕೊಳ್ಳುವ ಪ್ರಯತ್ನವೇ ‘ಮತ್ತೆ ಕಲ್ಯಾಣ’ವೆಂಬ ಈ ಆಂದೋಲನ. ಮತ್ತೆ ಕಲ್ಯಾಣ ಕೇವಲ ಒಂದು ಸಮಾರಂಭ, ವಿಚಾರ ಸಂಕಿರಣ ಅಲ್ಲ; ಸಮಾಜದ ಇಂದಿನ ತಲ್ಲಣಗಳಿಗೆ ಇದೇ ನೆಲದಲ್ಲಿ ಜನ್ಮ ತಳೆದ ಶರಣ ಚಳವಳಿಯ ತಾತ್ವಿಕ ಭಿತ್ತಿಯೊಳಗಿನಿಂದ ಪರಿಹಾರಗಳನ್ನು ಹುಡುಕಿಕೊಳ್ಳುವ ಅನ್ವೇಷಣೆ. ವ್ಯಕ್ತಿ, ಕಸುಬು, ಜಾತಿ, ಲಿಂಗ, ಭಾಷೆ, ಧರ್ಮಗಳ ಹೆಸರಿನಲ್ಲಿ ಮನುಷ್ಯ ಕುಲ ತನ್ನದೇ ಸಹಜೀವಿಗಳಿಂದ ದೂರ ಸರಿಯುತ್ತಾ ಒಡೆದುಹೋಗುತ್ತಿರುವ ಈ ಆತಂಕದ ಹೊತ್ತಿನಲ್ಲಿ ಎಲ್ಲರೂ ಜೊತೆ ಜೊತೆಯಾಗಿಯೇ ಮುನ್ನಡೆಯಲು ತೊಡಗುತ್ತಿರುವ ಹೊಸದೊಂದು ಪ್ರಕ್ರಿಯೆ. ಅಂದರೆ ಸ್ವಲ್ಪ ದೀರ್ಘವಾದ ಯಾತ್ರೆಗೆ ಜೀವಪರ ತುಡಿತಗಳುಳ್ಳ ಮನಸ್ಸುಗಳು ಸೇರಿ ಬರೆಯುತ್ತಿರುವ ಮುನ್ನುಡಿ. ಹೊಸ ಬೆಳಕನ್ನು ನೀಡುವ ಅರಿವು ನಮ್ಮ ಪರಂಪರೆಯೊಳಗೇ ಇದೆ. ಕನ್ನಡ ನಾಡಿನಲ್ಲಿ ೯೦೦ ವರ್ಷಗಳ ಕೆಳಗೆ ಹುಟ್ಟಿಕೊಂಡ ಬಸವಾದಿ ಶಿವಶರಣರ ಚಿಂತನೆ ಮತ್ತು ಕ್ರಿಯೆಯಲ್ಲಿ ಇಂದು ನಮಗೆ ದಾರಿ ದೀಪವಾಗಬಲ್ಲ ತತ್ವಗಳಿವೆ. ಹಾಗಾಗಿ ಕಲ್ಯಾಣದ ಕಡೆಗೆ ಹೊರಳಿ ನೋಡುತ್ತಾ, ಇಂದಿಗೆ ಬೇಕಾದ ಅರಿವು ಹಾಗೂ ಪ್ರೇರಣೆಯನ್ನು ಪಡೆದುಕೊಳ್ಳಲು ಹೊರಟಿದದ್ದೇವೆ.

ಕಲ್ಯಾಣವು ಜಂಗಮ ಸ್ವರೂಪಿ, ಎಲ್ಲಾ ದೇಶ-ಕಾಲಕ್ಕೆ ಅನ್ವಯ. ನಾವು ಪರಂಪರೆಗೆ ಮರಳಿ ಅಲ್ಲೇ ಹೂತುಹೋಗಬೇಕೆಂದೇನಲ್ಲ. ೧೨ನೆಯ ಶತಮಾನದ ಆಂದೋಲನದ ತಿರುಳು ಮತ್ತು ೨೧ನೆಯ ಶತಮಾನದ ಅಗತ್ಯಗಳನ್ನು ಬೆಸೆಯುವ ಹೊಸ ಆಂದೋಲನವನ್ನು ನಾವೆಲ್ಲರೂ ಸೇರಿ ಕಟ್ಟಬೇಕು. ಪರಿಸರಕ್ಕೆ ಬಂದಿರುವ ಗಂಡಾಂತರ, ಕಾಯಕ ಜೀವಿಗಳಾದ ರೈತರು ಮತ್ತು ಕಾರ್ಮಿಕರಿಗಿರುವ ಅಭದ್ರತೆ, ಶೋಷಿತ ಜಾತಿ-ಧರ್ಮಗಳ ಜನರ ಅಸಹಾಯಕತೆ, ಮಹಿಳೆಯರನ್ನು ಬಿಗಿದಿರುವ ಕಟ್ಟುಪಾಡಿನ ಸಂಕೋಲೆ, ಯುವಜನರನ್ನು ಕಾಡುತ್ತಿರುವ ನಿರುದ್ಯೋಗ, ಅಸಮಾನತೆ ಮತ್ತು ಎಲ್ಲರನ್ನೂ ಬಾಧಿಸುತ್ತಿರುವ ಬದುಕಿನ ಸಾರ್ಥಕತೆಯ ಚಿಂತೆ ಇವೆಲ್ಲಕ್ಕೂ ವಚನ ಚಳವಳಿಯ ಜ್ಞಾನ ಭಂಡಾರದ ಚಿಂತನೆಗಳಿಂದ ಪ್ರಯೋಜನ, ಪರಿಹಾರ ಪಡೆಯದಿದ್ದರೆ ನಮ್ಮನ್ನೇ ನಾವು ವಂಚಿಸಿಕೊಂಡಂತೆ. ಮತ್ತೆ ಕಲ್ಯಾಣವು ಅಂತಹ ಜ್ಞಾನಾಮೃತವನ್ನು ಬಿತ್ತರಿಸುವ ಒಂದು ಸಾಮೂಹಿಕ ಪ್ರಯತ್ನವಾಗಿದೆ.



ಲೈವ್ ಸ್ಟ್ರೀಮಿಂಗ್ ವೀಡಿಯೋ

    


"ಧನ ಸಹಕಾರ"

ಮತ್ತೆ ಕಲ್ಯಾಣ ಕೇವಲ ಒಂದು ಸಮಾರಂಭ, ವಿಚಾರ ಸಂಕಿರಣ ಅಲ್ಲ; ಸಮಾಜದ ಇಂದಿನ ತಲ್ಲಣಗಳಿಗೆ ಇದೇ ನೆಲದಲ್ಲಿ ಜನ್ಮ ತಳೆದ ಶರಣ ಚಳವಳಿಯ ತಾತ್ವಿಕ ಭಿತ್ತಿಯೊಳಗಿನಿಂದ ಪರಿಹಾರಗಳನ್ನು ಹುಡುಕಿಕೊಳ್ಳುವ ಅನ್ವೇಷಣೆ. ವ್ಯಕ್ತಿ, ಕಸುಬು, ಜಾತಿ, ಲಿಂಗ, ಭಾಷೆ, ಧರ್ಮಗಳ ಹೆಸರಿನಲ್ಲಿ ಮನುಷ್ಯ ಕುಲ ತನ್ನದೇ ಸಹಜೀವಿಗಳಿಂದ ದೂರ ಸರಿಯುತ್ತಾ ಒಡೆದುಹೋಗುತ್ತಿರುವ ಈ ಆತಂಕದ ಹೊತ್ತಿನಲ್ಲಿ ಎಲ್ಲರೂ ಜೊತೆ ಜೊತೆಯಾಗಿಯೇ ಮುನ್ನಡೆಯಲು ತೊಡಗುತ್ತಿರುವ ಹೊಸದೊಂದು ಪ್ರಕ್ರಿಯೆ. ನಾವೆಲ್ಲರೂ ಜಗತ್ತನ್ನು ಉತ್ತಮ ಸ್ಥಳವನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದೇವೆ. ಒಬ್ಬ ವ್ಯಕ್ತಿಯ ದಾನ ನೀಡುವಿಕೆಯು ಮಾನವೀಯತೆಯ ಹೆಚ್ಚಿನ ಒಳಿತಿಗೆ ಸಹಾಯ ಮಾಡುತ್ತದೆ, ಈ ಮಹಾನ್ ಕಾರಣಕ್ಕಾಗಿ ಉದಾರವಾಗಿ ಕೊಡುಗೆ ನೀಡಿ.

Account Details :

A/c Name      : Sri Shivakumar Kala Sangha (R) Sanhalli
A/c No.          : 10796100001812
IFSC Code    : PKGB0010796
Branch          : K.G.BANK.Sanehalli.


ಡಾ. ಪಂಡಿತಾರಾಧ್ಯ ಶ್ರೀಗಳು

ಕರ್ನಾಟಕದ ರಂಗಕಾಶಿ ಎಂದು ಪ್ರಸಿದ್ಧಿ ಪಡೆದ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಸಾಣೇಹಳ್ಳಿಯಲ್ಲಿರುವ ತರಳಬಾಳು ಬೃಹನ್ಮಠದ ಶಾಖಾ ಮಠದ ಪೀಠಾಧಿಪತಿಗಳಾದ ಡಾ. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರು ಈ ಅಭಿಯಾನದ ನೇತೃತ್ವ ವಹಿಸಿದ್ದಾರೆ.

ಸಹಮತ ವೇದಿಕೆ

ಕಲ್ಯಾಣವೆಂಬುದು ವಿಶಿಷ್ಟವಾದ ಅರಿವಿನ ನಡಿಗೆಯಾಗಿತ್ತು. ವಿವಿಧ ಸಮುದಾಯ, ಕಸುಬುಗಳಿಗೆ ಸೇರಿದ್ದ ಸಾಮಾನ್ಯರು ಅಸಾಮಾನ್ಯವಾದ ಪಾಠಗಳನ್ನು ಜಗತ್ತಿಗೆ ಕಲಿಸಿದರು. ಅದ್ಭುತವಾದ ಸಂಗತಿಗಳನ್ನು ಸರಳ ವಚನಗಳಲ್ಲಿ ಕ್ರೋಡೀಕರಿಸಿದರು.

ಸಾಣೇಹಳ್ಳಿ ರಂಗ ಸಂಸ್ಕೃತಿ

ಶ್ರೀ ಶಿವಕುಮಾರ ಕಲಾಸಂಘ'ಕ್ಕೆ ಮೆರಗು ತಂದುದು ೧೯೯೭ರಲ್ಲಿ ಅಸ್ತಿತ್ವಕ್ಕೆ ಬಂದ 'ಶಿವಸಂಚಾರ'. ಇದು ಶ್ರೀಸಿಜಿಕೆ ಅವರ ಕಲ್ಪನೆಯ ಕೂಸು. ಅವರೊಮ್ಮೆ ಸಾಣೇಹಳ್ಳಿಯಲ್ಲಿ ನಡೆದ 'ದಲಿತ ಮಕ್ಕಳ ರಂಗತರಬೇತಿ ಶಿಬಿರ'ದ ಸಮಾರೋಪ ಕಾರ್ಯಕ್ರಮಕ್ಕೆ ಆಗಮಿಸಿದ್ದರು.

ಜಿಲ್ಲಾವಾರು ಅಭಿಯಾನ

ಕರ್ನಾಟಕದ ರಂಗಕಾಶಿ ಎಂದು ಪ್ರಸಿದ್ಧಿ ಪಡೆದ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಸಾಣೇಹಳ್ಳಿಯಲ್ಲಿರುವ ತರಳಬಾಳು ಬೃಹನ್ಮಠದ ಶಾಖಾ ಮಠದ ಪೀಠಾಧಿಪತಿಗಳಾದ ಡಾ. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರು ಈ ಅಭಿಯಾನದ ನೇತೃತ್ವ ವಹಿಸಿದ್ದಾರೆ.

ಮತ್ತೆ ಕಲ್ಯಾಣ ಪ್ರೊಮೊ

ಕಲ್ಯಾಣವೆಂಬುದು ವಿಶಿಷ್ಟವಾದ ಅರಿವಿನ ನಡಿಗೆಯಾಗಿತ್ತು. ವಿವಿಧ ಸಮುದಾಯ, ಕಸುಬುಗಳಿಗೆ ಸೇರಿದ್ದ ಸಾಮಾನ್ಯರು ಅಸಾಮಾನ್ಯವಾದ ಪಾಠಗಳನ್ನು ಜಗತ್ತಿಗೆ ಕಲಿಸಿದರು. ಅದ್ಭುತವಾದ ಸಂಗತಿಗಳನ್ನು ಸರಳ ವಚನಗಳಲ್ಲಿ ಕ್ರೋಡೀಕರಿಸಿದರು.

ಲೈವ್ ಅಪ್ಡೇಟ್ಸ್

ಅಭಿಯಾನದ ಸ್ವರೂಪ : ಈ ಕಾರ್ಯಕ್ರಮಗಳು ಆಗಸ್ಟ್ ೧ರಿಂದ ೩೦ರವರೆಗೆ ರಾಜ್ಯದ ಪ್ರತಿಯೊಂದು ಜಿಲ್ಲೆಗೂ ಸಾಣೇಹಳ್ಳಿ ಶ್ರೀ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ಜೊತೆಯಲ್ಲಿ ಭೇಟಿ ನೀಡಲಿದೆ.